Advertisement

10 ದಿನದಲ್ಲಿ ಪೊಲೀಸರಿಗೆ ವಿಶೇಷ ಭತ್ಯೆ ಬಿಡುಗಡೆ

10:55 AM Nov 03, 2021 | Team Udayavani |

 ಬೆಂಗಳೂರು: ವಿಶೇಷ ಸಂದರ್ಭದಲ್ಲಿ ಸೇವೆ ಸಲ್ಲಿಸುವ ಪೊಲೀಸರ ಭತ್ಯೆಯನ್ನು ಹತ್ತು ದಿನದಲ್ಲಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಪೊಲೀಸ್‌ ಮುಖ್ಯ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ, ನಟ ಪುನೀತ್‌ ರಾಜಕುಮಾರ್‌ ಅಂತಿಮ ದರ್ಶನ ಹಾಗೂ ವಿದಾಯ ಸಂದರ್ಭ ದಲ್ಲಿ ಹರಿದು ಬಂದ ಜನಸಾಗರ ವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಸಾರ್ವಜನಿ ಕರ ಮೆಚ್ಚುಗೆಗೆ ಪಾತ್ರರಾದ ಪೊಲೀಸ್‌ ಸಿಬ್ಬಂದಿಯನ್ನು ಅಭಿನಂದಿಸಿದರು.

Advertisement

ಪುನೀತ್‌ ರಾಜಕುಮಾರ್‌ರವರ ಅನಿ ರೀಕ್ಷಿತ ನಿಧನ ಹಾಗೂ ಈ ಅವಧಿಯಲ್ಲಿ ಯೋಜನಾಬದ್ಧವಾಗಿ ರಕ್ಷಣಾ ವ್ಯವಸ್ಥೆ ನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದ ಕಾರ್ಯ ಶ್ಲಾಘನೀಯ ಎಂದರು. ಇದೇ ಸಂದರ್ಭದಲ್ಲಿ ತಮ್ಮ ವಿಶೇಷ ಕರ್ತವ್ಯ ನಿರ್ವಹಣೆಗೆ ನೀಡಲಾಗುವ ಭತ್ಯೆ ಹಾಗೂ ಇನ್ನಿತರ ಸವಲತ್ತುಗಳನ್ನು, ಕಾನ್‌ಸ್ಟೇಬಲ್‌ಗ‌ಳಿಗೆ, 10 ದಿನಗಳ ಒಳಗೆ ಪಾವತಿಸಲು ಕ್ರಮ ತೆಗೆದುಕೊಳ್ಳುವಂ ತೆಯೂ ಹಿರಿಯ ಅಧಿಕಾರಿಗಳಿಗೆ ಸಚಿ ವರು ಸೂಚಿಸಿದರು.

ಇದನ್ನೂ ಓದಿ;- ಅಪ್ಪು ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌: ಆರೋಪಿ ಸೆರೆ

ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಮಾತ ನಾಡಿ, ಪುನೀತ್‌ ರಾಜಕುಮಾರ್‌ರವರ ಅಕಾಲಿಕ ನಿಧನ ಹಾಗೂ ಅಂತಹ ಕ್ಲಿಷ್ಟ ರವಾದ ಸನ್ನಿವೇಶ ವನ್ನು, ವಿವರಿಸಿದ್ದಲ್ಲದೆ, ಎಲ್ಲಾ ಪೊಲೀಸ್‌ ಅಧಿಕಾರಿಗಳು ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ, ಯಶಸ್ವಿ ಯಾಗಿ ನಿಭಾಯಿಸಲು ಸಾಧ್ಯವಾಯಿತು ಎಂದರು.

ಮಾದರಿ ಕೇಸ್‌ ಸ್ಟಡಿಯಾಗಿ ದಾಖಲಿಸಿ- ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ನಮ್ಮ ಜೊತೆಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದರು ಎಂದೂ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಸ್ಮರಿಸಿದರು. ಅನಿರೀಕ್ಷಿತ ಹಾಗೂ ಸವಾಲಿನ ಸಂದರ್ಭವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ಗಳಿಸಿದ ಅನುಭವವನ್ನು ಒಂದು ‘ಮಾದರಿ ಕೇಸ್‌ ಸ್ಟಡಿ’ ಆಗಿ ದಾಖಲಿಸಬೇಕು ಎಂದೂ ತಿಳಿಸಿದರು. ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next