Advertisement

ಕ್ಯಾಸ್ಸಿನಿ ಪಯಣ ಅಂತ್ಯ

09:04 AM Sep 16, 2017 | |

ವಾಷಿಂಗ್ಟನ್‌: ಇದೇ ವರ್ಷ ಫೆಬ್ರವರಿಯಲ್ಲಿ ಶನಿಯ ಉಂಗುರದ ನಡುವೆ ನುಸುಳಿ ಅಚ್ಚರಿ ಮೂಡಿಸಿದ್ದ ನಾಸಾದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ನೌಕೆ “ಕ್ಯಾಸ್ಸಿನಿ’ ಸ್ತಬ್ಧವಾಗಿದೆ. ಸತತ 20 ವರ್ಷಗಳಿಂದ ಒಂದು ನಿಮಿಷ ಕೂಡ ನಿಷ್ಕ್ರಿಯಗೊಳ್ಳದೆ ಕಾರ್ಯ ನಿರ್ವಹಿಸಿದ್ದ ಕ್ಯಾಸ್ಸಿನಿ, ಶುಕ್ರವಾರ ಮಧ್ಯಾಹ್ನದ ವೇಳೆ ಶನಿ ಗ್ರಹದ ವಾತಾವರಣದೊಳಗೆ ಪ್ರವೇಶಿಸುವ ಮೂಲಕ ಪಯಣವನ್ನು ಅಂತ್ಯಗೊಳಿಸಿತು.

Advertisement

ಶನಿ ಗ್ರಹಕ್ಕಿರುವ ಚಂದ್ರನ ಕುರಿತು ಮಾಹಿತಿ ಕಲೆಹಾಕಲು 20 ವರ್ಷಗಳ ಹಿಂದೆ ನಾಸಾ ಶನಿಯ ಕಕ್ಷೆಗೆ ಹಾರಿಬಿಟ್ಟಿದ್ದ ಕ್ಯಾಸ್ಸಿನಿ, ನಾಸಾದ ಅತ್ಯಂತ ಯಶಸ್ವಿ ಬಾಹ್ಯಾಕಾಶ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಶನಿಯ ವಾತಾವರಣದೊಳಗೆ ಲೀನವಾಗುವ ಕಡೇ ಕ್ಷಣದವರೆಗೂ ಕಾರ್ಯ ನಿರ್ವಹಿಸಿರುವ ನೌಕೆ, ತನ್ನ ಅಂತಿಮ ಕ್ಷಣದ ಚಿತ್ರಗಳನ್ನು ನಾಸಾ ನಿಯಂತ್ರಣ ಕೇಂದ್ರಕ್ಕೆ ಕಳಿಸಿಕೊಟ್ಟಿರುವುದು ವಿಶೇಷ. ತನ್ನ ಕಡೇ ವಾರದ ಕಾರ್ಯಾಚರಣೆಯಲ್ಲಿ ಮತ್ತೂಮ್ಮೆ ಶನಿ ಗ್ರಹ ಮತ್ತು ಅದರ ಉಂಗುರದ ನಡುವೆ ನುಸುಳಿರುವ ಕ್ಯಾಸ್ಸಿನಿ, ತನ್ನ ವಿದಾಯದ ಹಾರಾಟದಲ್ಲಿ ಗಂಟೆಗೆ ಸುಮಾರು 120,000 ಕಿ.ಮೀ. ವೇಗದಲ್ಲಿ ಶನಿ ಗ್ರಹದ ಅತ್ಯಂತ ದೈತ್ಯ ಚಂದ್ರ, ಟೈಟನ್‌ ಮೂಲಕ ಹಾದು ಹೋಗಿದೆ ಎಂದು ನಾಸಾ ಹೇಳಿದೆ.

ಶನಿಗ್ರಹದ ಕಕ್ಷೆಯಲ್ಲಿರುವ ಅನಿಲ ತನ್ನನ್ನು ಆವರಿಸುತ್ತಿದ್ದಂತೆ ಕ್ಯಾಸ್ಸಿನಿ ನಿಯಂತ್ರಣ ಕಳೆದುಕೊಂಡಿದ್ದು, ಬಾಹ್ಯಾಕಾಶ ನೌಕೆಯು ಭೂಮಿಯೊಂದಿಗಿನ ಸಂಪರ್ಕಕ್ಕೆ ಹೊಂದಿದ್ದ ರೇಡಿಯೋ ಲಿಂಕ್‌ ಕೂಡ ನಿಷ್ಕ್ರಿಯವಾಗಿದೆ. ಇದೇ ವೇಳೆ ಒಂದು ಬೃಹತ್‌ ವ್ಯಾನ್‌ನ ಗಾತ್ರದಷ್ಟಿದ್ದ ಬಾಹ್ಯಾಕಾಶ ನೌಕೆಯ ಅಲ್ಯುಮಿನಿಯಂ ಹೊದಿಕೆ ಕೂಡ ಕರಗಿರುವ ಸಾಧ್ಯತೆ ಇದೆ ಎಂದು ನಾಸಾದ ನಿಯಂತ್ರಣ ಕೊಠಡಿ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next