Advertisement

ಕಾರ್ಮಿಕ ಇಲಾಖೆ ಜನರಿಗೆ ಹತ್ತಿರ ಆಗುವ ಕಾರ್ಯ ಮಾಡುತ್ತಿದೆ: ಸ್ಪೀಕರ್ ಕಾಗೇರಿ

07:21 PM Feb 26, 2022 | Team Udayavani |

ಶಿರಸಿ: ಕಾರ್ಮಿಕ ಇಲಾಖೆಯ ಜನರಿಗೆ ಹತ್ತಿರ ಆಗುವ ಕಾರ್ಯ ಮಾಡುತ್ತಿದೆ. ಕಾರ್ಮಿಕರ ಪರವಾಗಿ ಹೊಸತನ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು.

Advertisement

ನಗರದ ಗಾಂಧಿ ಶನಿವಾರ ನಗರದಲ್ಲಿ ಕಾರ್ಮಿಕ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕಾರ್ಮಿಕ ಇಲಾಖೆ ಮೊದಲಿನಂತೆ ಎಲ್ಲರಿಗೂ ಗೊತ್ತಿಲ್ಲ ಎಂಬಂತಿಲ್ಲ. ಜನರಿಗೆ ಹತ್ತಿರದ ಇಲಾಖೆಯಾಗಿದೆ. ಕಾರ್ಮಿಕ ಇಲಾಖೆ ಕಾರ್ಯಕ್ಕೆ ಹೆಬ್ಬಾರರ ಅಭಿನಂದನೆ ಸಲ್ಲಿಸುತ್ತೇನೆ. ಶಾಸನ ಸಭೆಯಲ್ಲೂ‌ ಕಾರ್ಮಿಕ ಇಲಾಖೆಯ ಬಗ್ಗೆ ಶ್ಲಾಘನೆ ಆಗುತ್ತಿದೆ. ಜವಬ್ದಾರಿ ಇರುವಾಗ ಒಳ್ಳೆಯದು ಮಾಡುವ ಕಾರ್ಯ ಮಾಡುತ್ತಿದ್ದಾರೆ ಹೆಬ್ಬಾರರು ಎಂದರು.

ಶ್ರಮ ಶಕ್ತಿ ಗೌರವಿಸುವ ಕಾರ್ಯ ಮಾಡುತ್ತಿದೆ. ಶ್ರಮಿಕರ ಶ್ರಮದ ಕಾರ್ಯದಿಂದ ನಾಡು ಬೆಳೆದಿದೆ ಎಂದ ಅವರು

2.6 ಕೋ.ರೂ. ಮೊತ್ತದ ಕಾಮಗಾರಿಯಾಗಿದೆ. 9400 ಚದುರಡಿ ಯಲ್ಲಿ ಮೂರು ಹಂತದ ಕಟ್ಟಡ ಆಗಿದೆ ಎಂದರು‌.

Advertisement

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್,ಶಿರಸಿ, ಸಿದ್ದಾಪುರ ಸೇರಿ ಏಳೂ ಕ್ಷೇತ್ರಕ್ಕೆ ಕಾರ್ಮಿಕ ಭವನ ಮಂಜೂರಾತಿ ಆಗಿತ್ತು. ಮೂರು ತಾಕೂಕಿನಲ್ಲಿ ಸ್ಥಳದ‌ ಲಭ್ಯತೆ ಆಗಬೇಕು. ಉತ್ತರ ಕನ್ನಡ‌ಜಿಲ್ಲೆಯ‌ ಹನ್ನೊಂದು‌ ತಾಲೂಕಿನಲ್ಲೂ ಸ್ವಂತ ಕಟ್ಟಡ ಆಗಬೇಕು. ಒಂದೇ ಸೂರಿನಡಿ ಭವನ ಆಗಬೇಕು. ಕಾರ್ಮಿಕ ಇಲಾಖೆಯ ಕ್ರಾಂತಿಕಾರಿ ಯೋಜನೆ ತರಲಾಗುತ್ತದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರಸಭೆ ಪೌರಾಯುಕ್ತ ಕೇಶವ ಚೌಗಲೆ, ತಹಸೀಲ್ದಾರ ಎಂ.ಆರ್.ಕುಲಕರ್ಣಿ ಇತರರು‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next