Advertisement

ಸಿದ್ದು ಸೋಲಿಗೆ ಸ್ಪೀಕರ್‌ ಕಣ್ಣೀರು

06:25 AM Dec 10, 2018 | Team Udayavani |

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಿದ್ದರೆ ಸೋಲಿನಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಆದರೆ, ಅವರು ಚಾಮುಂಡೇಶ್ವರಿ ಕ್ಷೇತ್ರವನ್ನು ಬಿಟ್ಟು ಬರಲು ಒಪ್ಪಲಿಲ್ಲ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಕಣ್ಣೀರಿಟ್ಟ ಘಟನೆ ಕನಕ ಜಯಂತಿಯಲ್ಲಿ ಜರುಗಿತು. 

Advertisement

ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, “ಸಿದ್ದರಾಮಯ್ಯ ನನ್ನ ನಾಯಕ. ಅವರು ಹೇಳಿದ ಕಾರಣಕ್ಕಾಗಿಯೇ ಸ್ಪೀಕರ್‌ ಆಗಲು ಒಪ್ಪಿಕೊಂಡೆ. ಸಿದ್ದರಾಮಯ್ಯನವರನ್ನು ತಮ್ಮ ಜೀವ ಇರುವವರೆಗೂ ಕೆಳಗೆ ಬೀಳಲು ಬಿಡುವುದಿಲ್ಲ. ಅವರಿಗೆ ಸೋಲು, ಅಪಮಾನ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾವು ಮತ್ತು ನಸೀರ್‌ ಅಹಮದ್‌ ಪರಿಪರಿಯಾಗಿ ಕೇಳಿಕೊಂಡಿದ್ದೆವು. ಆದರೆ, ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಹಿಂದಕ್ಕೆ ಸರಿಯುವುದಿಲ್ಲವೆಂದು ಹೇಳಿ ಬಿಟ್ಟಿದ್ದರು. ಒಂದು ವೇಳೆ ಅವರು ಕೋಲಾರದಿಂದ ಸ್ಪರ್ಧಿಸಿದ್ದರೆ ಇತಿಹಾಸ ಸೃಷ್ಟಿಯಾಗುತ್ತಿತ್ತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next