ಸ್ಪೇನ್: ಕೋವಿಡ್-19ನಿಂದಾಗಿ ಸ್ಪೇನ್ ನಲ್ಲಿ 7,716 ಮಂದಿ ಜೀವ ಕಳೆದುಕೊಂಡಿದ್ದಾರೆ.
ಆ ಮೂಲಕ ಕೋವಿಡ್-19 ವೈರಸ್ ನಿಂದ ಅತಿ ಹೆಚ್ಚು ಸಾವು ಸಂಭವಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಪೇನ್ ಎರಡನೇ ಸ್ಥಾನಕ್ಕೇರಿದೆ. ಗುಣಮಟ್ಟದ ವೈದ್ಯಕೀಯ ವ್ಯವಸ್ಥೆ ಇದ್ದರೂ, ಸ್ಪೇನ್ ಹೀನಾಯ ಸ್ಥಿತಿಯಲ್ಲಿದೆ. ಈ ಭೀಕರ ಪರಿಸ್ಥಿತಿಯನ್ನು ನಿಭಾಯಿಸಲು ಹರಸಾಹಸ ಪಡುತ್ತಿರುವ ಸ್ಪ್ಯಾನಿಶ್ ವೈದ್ಯರು ದೇವರ ಮೊರೆ ಹೋಗಿದ್ದಾರೆ.
ಸ್ಪೇನ್ ನಲ್ಲಿನ ಪರಿಸ್ಥಿತಿ ಕೈಮೀರುತ್ತಿದ್ದು, ವೈದ್ಯರೇ ಈಗ ಭಗವಂತನ ಪಾರ್ಥಿಸುತ್ತಿದ್ದಾರೆ. ರೋಗಿಗಳ ಪ್ರಾಣ ಉಳಿಸಲು ಸ್ಪೇನ್ ನ ವೈದ್ಯರು “ಓಂ’ಕಾರ ಪಠಿಸಿ, ಜೀವ ಸಂಕುಲ ಉಳಿಸಲು ದೇವರಲ್ಲಿ ಬೇಡಿ ಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗೆ ಸ್ಪೇನ್ ವೈದ್ಯರುಗಳ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷ ಎಂದರೆ ಭಾರತೀಯರನ್ನೂ ಈ ವೀಡಿಯೋ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಕೋವಿಡ್-19 ರೋಗಿಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುವ ವೀಡಿಯೋ ಫೇಸ್ ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ವಾಟ್ಸ… ಆಪ್ ಗಳಲ್ಲಿ ಹರಿದಾಡುತ್ತಿದೆೆ. ಹೆಮ್ಮೆಯಿಂದ ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಭಾರತೀಯರು ಹಂಚಿಕೊಳ್ಳುತ್ತಿದ್ದಾರೆ.