Advertisement

ಸ್ಪೇನ್‌ 5ನೇ ಬಾರಿ ಚಾಂಪಿಯನ್‌

01:38 AM Jul 02, 2019 | Sriram |

ಉಡಿನ್‌ (ಇಟಲಿ): ಬಲಿಷ್ಠ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಸ್ಪೇನ್‌ ತಂಡ 5ನೇ ಸಲ ಯುರೋಪಿಯನ್‌ ಅಂಡರ್‌-21 ಫ‌ುಟ್ಬಾಲ್ ಪ್ರಶಸ್ತಿ ಯನ್ನು ಗೆದ್ದುಕೊಂಡಿದೆ.

Advertisement

2017ರ ಫೈನಲ್ನಲ್ಲಿ ಸ್ಪೇನ್‌ ತಂಡ ಜರ್ಮನಿಗೆ 0-1 ಗೋಲಿನಿಂದ ಶರಣಾಗಿತ್ತು. ಆದರೆ ಈ ಬಾರಿ ಸ್ಪೇನ್‌ ಆಟಗಾರರು ಭರ್ಜರಿ ಆಟವಾಡಿ ಪ್ರಾಬಲ್ಯ ಮೆರೆದಿದ್ದರು.

ಪಂದ್ಯದ ಕೊನೆಯ ಹಂತದಲ್ಲಿ ನದೀಮ್‌ ಅಮಿರಿ ಗೋಲು ಹೊಡೆ ಯುವ ಮೊದಲು ಸ್ಪೇನ್‌ ಪಂದ್ಯ ದುದ್ದಕ್ಕೂ ಮಿಂಚಿನ ಆಟವಾಡಿತ್ತು. 8ನೇ ನಿಮಿಷದಲ್ಲಿ ಫ್ಯಾಬಿಯನ್‌ ರೂಯಿಜ್‌ ಮೊದಲ ಗೋಲು ಹೊಡೆದು ಮುನ್ನಡೆ ಸಾಧಿಸಿದ್ದರೆ 69ನೇ ನಿಮಿಷದಲ್ಲಿ ಡ್ಯಾನಿ ಓಲ್ಮೊ 2ನೇ ಗೋಲು ಹೊಡೆದಿದ್ದರು.

ಸ್ಪೇನ್‌ 5ನೇ ಬಾರಿ ‘ಯುರೋ ಅಂಡರ್‌-21 ಫ‌ುಟ್ಬಾಲ್’ ಪ್ರಶಸ್ತಿಗೆದ್ದು ಇಟಲಿ ಸಾಧನೆಯನ್ನು ಸರಿಗಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next