Advertisement

ಸ್ಪೇನ್‌: ಸಾವು ಹೆಚ್ಚಳಕ್ಕೆ ನಾಲ್ಕು ಕಾರಣ

09:29 AM Apr 06, 2020 | mahesh |

ಗ್ರೆನಡಾ: ಸ್ಪೇನ್‌ನಲ್ಲಿ ಸರಕಾರಹೇಳಿದ ಸೂಚನೆಗಳನ್ನೆಲ್ಲಾ ಪಾಲಿಸಿದರು, ಯಾರೂ ಅಸಹಕಾರ ವ್ಯಕ್ತಪಡಿಸಲಿಲ್ಲ. ಲಾಕ್‌ಡೌನ್‌ ಮಾಡಿದ್ದನ್ನೂ ತಮ್ಮ ಒಳಿತಿಗಾಗಿ ಎಂದು ಸ್ವಾಗತಿಸಿದರು. ಸಣ್ಣ ಪುಟ್ಟ ಕಾಯಿಲೆಗಳಿಗೆ ಸದ್ಯಕ್ಕೆ ಆಸ್ಪತ್ರೆಗೆ ಬರಬೇಡಿ ಎಂಬ ಸರಕಾರದ ಮನವಿಯನ್ನೂ ಪುರಸ್ಕರಿಸಿದರು. ಆದರೂ ಸಾವಿನ ಸಂಖ್ಯೆ ಯಾಕೆ ಕಡಿಮೆ ಮಾಡಲಾಗಲಿಲ್ಲ?

Advertisement

ಈ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗುವಂತೆ, ಎಲ್ಲವೂ ಸರಿಯಿತ್ತು. ಆದರೂ ಎಲ್ಲೋ ತಾಳ ತಪ್ಪಿತು. ಸದ್ಯದ ವಿಶ್ಲೇಷಣೆ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗಿದ್ದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ- ಬಹುತೇಕ ಮಂದಿ ಸೂಚನೆಗಳನ್ನು ಪಾಲಿಸಿದರೂ ಒಂದಿಷ್ಟು ಜನ ತಮ್ಮಷ್ಟಕ್ಕೇ ನಿಯಮ ಮೀರಿ ಕೂಟ, ಸಭೆಗಳನ್ನು ನಡೆಸಿದ್ದರು. ಚುಂಬನ, ಹ್ಯಾಂಡ್‌ ಶೇಕ್‌ ಮೂಲಕ ಅಭಿನಂದನೆ ಇತ್ಯಾದಿ ಎಲ್ಲವನ್ನೂ ಎಗ್ಗಿಲ್ಲದೇ ಮಾಡಿದರು. ಅದರಿಂದ ಸೋಂಕು ಹರಡುವಿಕೆ ತೀವ್ರಗೊಂಡಿತು.

ಎರಡನೆಯದು- ಈ ಸೋಂಕು ಹರಡುವಿಕೆ ಹೆಚ್ಚಾಗಿ ನಿಯಂತ್ರಣ ತಪ್ಪುವಷ್ಟು ಸೋಂಕಿತರು ಆಸ್ಪತ್ರೆಗಳನ್ನು ತುಂಬಿಕೊಂಡರು. ಇದ್ದ ಚಿಕಿತ್ಸಾ ಸೌಲಭ್ಯ ಸಾಲದಾಯಿತು. ಮೊದಲೇ ವೈದ್ಯಕೀಯ ಉಪಕರಣಗಳು ಸಾಕಷ್ಟು ಸಂಖ್ಯೆಯಲ್ಲಿಲ್ಲ. ಅದರೊಂದಿಗೆ ವೈದ್ಯರೂ ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚು ರಕ್ಷಣಾ ಉಪಕರಣಗಳಿಲ್ಲದಿರುವುದೂ ಸಮಸ್ಯೆಯಾಯಿತು. ಇಟಲಿಗೆ ಹೋಲಿಸಿದರೆ ಸ್ಪೇನ್‌ನ ಶೇ. 8ರಷ್ಟು ಆರೋಗ್ಯ ಕಾರ್ಯಕರ್ತರು ಕೋವಿಡ್- 19 ಭೀತಿಯಲ್ಲಿದ್ದಾರೆ. ಹೆಚ್ಚು ಮಂದಿ ವೈದ್ಯರೂ ಸತ್ತಿದ್ದಾರೆ.

ಇದನ್ನು ಮನಗಂಡ ಸ್ಟೇಟ್‌ ಕಾನ್ಫೆಡರೇಶನ್‌ ಆಫ್‌ ಮೆಡಿಕಲ್‌ ಯೂನಿ ಯನ್ಸ್‌ (ಸಿಇಎಸ್‌ಎಂ) ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ. ಆದಷ್ಟು ಬೇಗ ಸಾಕಷ್ಟು ರಕ್ಷಣಾ ಸಾಧನಗಳನ್ನು ಒದಗಿಸುವಂತೆ ಆರೋಗ್ಯ ಸಚಿವಾಲಯವನ್ನು ಕೋರಿದೆ. ಜನರು ರಕ್ಷಣೆಯಲ್ಲಿದ್ದಾರೆ. ಮೂರನೆಯದು- ಆಸ್ಪತ್ರೆಗಳಲ್ಲಿ ಶುಚಿತ್ವವನ್ನು ಕಾಪಾಡಲು ಅಗತ್ಯವಿರುವ ಪೂರಕ ಸಾಮಗ್ರಿಗಳ ಕೊರತೆಯೂ ಸಾಕಷ್ಟಿದೆ. ಇದ ರಿಂದ ಆರೋಗ್ಯ ಸಿಬಂದಿಗೇ ಸಾಂಕ್ರಾಮಿಕ ಸೋಂಕು ತಗ ಲುವ ಭೀತಿಯಲ್ಲಿದ್ದಾರೆ.

ನಾಲ್ಕನೆಯದು- ಸ್ಪೇನ್‌ ನಲ್ಲಿ ಹಿರಿಯ ನಾಗರಿಕರ ಸಂಖ್ಯೆ ತುಸು ಹೆಚ್ಚು. ಅವರು ದೈಹಿಕವಾಗಿ ದುರ್ಬಲರಾಗಿದ್ದು, ಅವರ ಮನೆಗಳಲ್ಲೂ ಸಾಕಷ್ಟು ವೈದ್ಯಕೀಯ ವ್ಯವಸ್ಥೆ ಹೊಂದಿಲ್ಲ. ಇವೆಲ್ಲವೂ ಸಾವಿನ ಸಂಖ್ಯೆ ಹೆಚ್ಚಲು ಕಾರಣವೆಂದಿವೆ ಮಾಧ್ಯಮಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next