Advertisement

ಬಾಹ್ಯಾಕಾಶ ಸಹಭಾಗಿತ್ವ ಚೀನ ಜತೆ ಒಪ್ಪಂದ ರದ್ದು

12:30 AM Mar 12, 2019 | |

ಹೊಸದಿಲ್ಲಿ: ನಾವು ನೋಡದ ಚಂದ್ರನ ಭಾಗದಲ್ಲಿ ಗಗನ ನೌಕೆಯನ್ನು ಕಳುಹಿಸಿ, ಅಧ್ಯಯನ ನಡೆಸುವ ಚೀನದ ಚೇಂಜ್‌ 4 ಯೋಜನೆಯಲ್ಲಿ ಭಾರತ ಸಹಭಾಗಿತ್ವ ನೀಡಿತ್ತಾದರೂ, ಭಾರತದ ಉಪಗ್ರಹವನ್ನು ಹೊತ್ತೂಯ್ಯಲು ಚೀನ ಬಾಹ್ಯಾಕಾಶ ಸಂಸ್ಥೆ ನಿರಾಕರಿಸಿದ್ದರಿಂದಾಗಿ ಈ ಸಹಭಾಗಿತ್ವ ಮುರಿದು ಬಿದ್ದಿದೆ. ಕಳೆದ ಜನವರಿಯಲ್ಲೇ ಈ ಗಗನ ನೌಕೆಯನ್ನು ಚೀನ ಚಂದ್ರನಲ್ಲಿಗೆ ಕಳುಹಿಸಿದೆ. ಅಂದಿನಿಂದಲೂ ಚೇಂಜ್‌ 4 ನೌಕೆ ಹಲವು ಉನ್ನತ ಗುಣಮಟ್ಟದ ಫೋಟೋಗಳನ್ನು ಕಳುಹಿಸಿದೆ. ಭಾರತ ಸೇರಿ ಹಲವು ದೇಶಗಳು ಈ ಯೋಜನೆಯ ಭಾಗವಾಗಿದ್ದವು. 2015ರಲ್ಲಿ ಯೋಜನೆಗೆ  ಚೀನ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಇಸ್ರೋ ಸಹಭಾಗಿತ್ವ ಸಾಧಿಸಿತ್ತು. ಜರ್ಮನಿ, ಸ್ವೀಡನ್‌, ನೆದರ್ಲೆಂಡ್ಸ್‌ ಹಾಗೂ ರಷ್ಯಾ ಕೂಡ ಕೈಜೋಡಿಸಿತ್ತು. ಈ ಯೋಜ ನೆಯ ಅಡಿ 7 ವರ್ಷಗಳಲ್ಲಿ 19 ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶವಿತ್ತು. ರಿಮೋಟ್‌ ಸೆನ್ಸಿಂಗ್‌ ಉಪಗ್ರಗಳು, ಬಾಹ್ಯಾಕಾಶ ಆಧಾರಿತ ಹವಾಮಾನ ಮುನ್ಸೂಚನೆ ವ್ಯವಸ್ಥೆ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ ಸಾಧಿಸುವ ಉದ್ದೇಶವಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next