Advertisement

ಇಸ್ರೋದಿಂದ 5 ದೇಶಗಳಲ್ಲಿ ಬಾಹ್ಯಾಕಾಶ ಕೇಂದ್ರ

12:30 AM Jan 04, 2019 | Team Udayavani |

ಹೊಸದಿಲ್ಲಿ: ನೆರೆ ದೇಶಗಳೊಂದಿಗೆ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಚೀನಾಗೆ ತಿರುಗೇಟು ನೀಡುವುದಕ್ಕಾಗಿ ಐದು ದೇಶಗಳಲ್ಲಿ ಗ್ರೌಂಡ್‌ ಸ್ಟೇಷನ್‌ಗಳು ಹಾಗೂ 500 ಕ್ಕೂ ಹೆಚ್ಚು ಸಣ್ಣ ಟರ್ಮಿನಲ್‌ಗ‌ಳನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸ್ಥಾಪಿಸುತ್ತಿದೆ. ಭೂತಾನ್‌, ನೇಪಾಳ, ಮಾಲ್ಡೀವ್ಸ್‌, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಈ ಬಾಹ್ಯಾಕಾಶ ನೆಲೆಗಳನ್ನು ಸ್ಥಾಪಿಸಲಾಗುತ್ತದೆ.

Advertisement

ಟೆಲಿವಿಷನ್‌ ಬ್ರಾಡ್‌ಕಾಸ್ಟಿಂಗ್‌, ಟೆಲಿಫೋನಿ ಮತ್ತು ಇಂಟರ್ನೆಟ್‌ ಸೌಲಭ್ಯ, ವಿಪತ್ತು ನಿರ್ವಹಣೆ ಹಾಗೂ ಟೆಲಿ ಮೆಡಿಸಿನ್‌ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಈ ಕೇಂದ್ರಗಳು ನೆರವಾಗಲಿವೆ. ಇನ್ನೊಂದೆಡೆ ಇಸ್ರೋ ತನ್ನ ಉಪಗ್ರಹಗಳ ಜೊತೆಗೆ ಸಂವಹನ ನಡೆಸಲೂ ಇವುಗಳನ್ನು ಬಳಸಬಹುದಾಗಿದೆ. ಈ ಪೈಕಿ ಜನವರಿ 9 ರ ವೇಳೆಗೆ ಭೂತಾನ್‌ ರಾಜಧಾನಿ ಥಿಂಪುವಿನಲ್ಲಿ ಕೇಂದ್ರ ಸಿದ್ಧವಾಗಲಿದ್ದು, ಇದನ್ನು 15ರಂದು ಉದ್ಘಾಟಿಸುವ ಸಾಧ್ಯತೆಯಿದೆ.

2019ರಲ್ಲಿ 32 ಮಿಷನ್‌: 2019ರಲ್ಲಿ ಚಂದ್ರಯಾನ-2 ಸೇರಿ 32 ಉಡಾವಣೆಯನ್ನು ಇಸ್ರೋ ಕೈಗೊಳ್ಳಲಿದೆ. ಈ ಪೈಕಿ 14 ಉಡಾವಣಾ ವಾಹನಗಳು, 17 ಸ್ಯಾಟಲೈಟ್‌ಗಳು ಹಾಗೂ 1 ಟೆಕ್‌ ಡೆಮೋ ಮಿಷನ್‌ಗಳು ಇರಲಿವೆ ಎಂದು ಇಸ್ರೋ ಚೇರನ್‌ ಕೆ.ಸಿವನ್‌ ಹೇಳಿದ್ದಾರೆ. ಚಂದ್ರ ಯಾನ 2 ಅನ್ನು ಜನವರಿಯಿಂದ ಫೆಬ್ರವರಿ 16 ಮಧ್ಯೆ ಉಡಾವಣೆ ಮಾಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next