Advertisement

ದೆಹಲಿ: ಸ್ಪಾ ದಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತೆಯ ಮೇಲೆ ಗ್ಯಾಂಗ್ ರೇಪ್

06:33 PM Aug 06, 2022 | Team Udayavani |

ನವದೆಹಲಿ : ರಾಷ್ಟ್ರ ರಾಜಧಾನಿಯ ಸ್ಪಾ ವೊಂದರಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ವಿವಾಹಿತೆಯೊಬ್ಬರ ಮೇಲೆ ಇಬ್ಬರು ಗ್ಯಾಂಗ್ ರೇಪ್ ಎಸಗಿದ ಘಟನೆ ನಡೆದಿದೆ

Advertisement

ಘಟನೆಯ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸ್ಪಾ ನಲ್ಲಿ ಮ್ಯಾನೇಜರ್ ಆಗಿದ್ದ ರಾಹುಲ್, ಗ್ರಾಹಕ ಸತೀಶ್ ಕುಮಾರ್, ಸ್ಪಾ ಮಾಲಿಕರಾದ ಬ್ರಿಜ್ ಗೋಪಾಲ್ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ.

ಪೊಲೀಸ್ ಉಪ ಕಮಿಷನರ್ ಉಷಾ ರಂಗನಾನಿ ಅವರು ಘಟನೆ ಕುರಿತು ವಿವರಗಳನ್ನು ಒದಗಿಸಿ, ಪಿತಾಂಪುರದಲ್ಲಿರುವ ಸ್ಪಾದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ಮೌರ್ಯ ಎನ್‌ಕ್ಲೇವ್ ಪೊಲೀಸ್ ಠಾಣೆಯಲ್ಲಿ ಪಿಸಿಆರ್ ಕರೆ ಸ್ವೀಕರಿಸಲಾಗಿತ್ತು. ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಸ್ಥಳದಲ್ಲಿ, ಸಂತ್ರಸ್ತೆ, ತನ್ನ ಪತಿಯೊಂದಿಗೆ, ಸ್ಪಾ ಸೆಂಟರ್‌ನ ಹೊರಗೆ ಹಾಜರಾಗಿದ್ದರು ಮತ್ತು ಮ್ಯಾನೇಜರ್ ಮತ್ತು ಇನ್ನೊಬ್ಬ ವ್ಯಕ್ತಿಯಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಜುಲೈ 30 ರಂದು ತಾನು ` ಸ್ಪಾ ಸೆಂಟರ್`ಗೆ ಸೇರಿದ್ದೆ ಮತ್ತು ಆಗಸ್ಟ್ 4 ರಂದು ಸಂಜೆ 6 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಬಂದು ದೇಹ ಸಂಪರ್ಕಕ್ಕಾಗಿ ಒತ್ತಾಯಿಸಿದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

“ಆರೋಪಿ ಮ್ಯಾನೇಜರ್ ಆಕೆಗೆ ತಂಪು ಪಾನೀಯವನ್ನು ನೀಡಿದ್ದು, ಅದನ್ನು ಸೇವಿಸಿದ ನಂತರ ಆಕೆಗೆ ತಲೆಸುತ್ತು ಬಂತು ಆ ಬಳಿಕ ಇಬ್ಬರೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ” ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Advertisement

ಘಟನೆಯ ಬಗ್ಗೆ ಪೊಲೀಸರಿಗೆ ತಿಳಿದ ನಂತರ, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು ಮತ್ತು ದೆಹಲಿ ಮಹಿಳಾ ಆಯೋಗದ ಸಲಹೆಗಾರರನ್ನು ಕರೆಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next