Advertisement

ಗ್ರಾಮದಲ್ಲಿ ಆಶಾಂತಿ ಉಂಟುಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ: ವಿಕ್ರಮ್ ಆಮೇಟಿ

06:38 PM Jul 26, 2022 | Suhan S |

ಹೊಳೆಹೊನ್ನೂರು: ಗ್ರಾಮೋದ್ದಾರದಲ್ಲಿ ಗ್ರಾಮಸ್ಥರ ಒಗ್ಗಟಿನ ಪ್ರಯತ್ನಗಳು ಫಲ ನೀಡುತ್ತವೆ. ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಗ್ರಾಮ ಮುಖಂಡರು ಎಚ್ಚರಿಕೆ ವಹಿಸಬೇಕು. ಗ್ರಾಮದ ಮುಜಾರಾಯಿ ದೇವಸ್ಥಾನದ ಹೆಸರನ್ನು ಬಳಸಿಕೊಂಡು ಅನಧಿಕೃತವಾಗಿ ಟ್ರಸ್ಟ್ ರಚಿಸಿಕೊಂಡು ಗ್ರಾಮದಲ್ಲಿ ಆಶಾಂತಿ ಉಂಟುಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ವಿಕ್ರಮ್ ಆಮೇಟಿ ಹೇಳಿದರು.

Advertisement

ದಾನವಾಡಿಯ ಗುಡ್ಡದಲ್ಲಿರುವ ಮುಜಾರಾಯಿ ಇಲಾಖೆಗೆ ಸೇರಿರುವ ಗಿರಿ ರಂಗನಾಥ ದೇವಸ್ಥಾನ ಹೆಸರಿನಲ್ಲಿ ನಕಲಿ ಟ್ರಸ್ಟ್ ತೆರೆದು ಗ್ರಾಮದಲ್ಲಿ ಅಶಾಂತಿಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಗ್ರಾಮಸ್ಥರ ಸಹಯೋಗದಲ್ಲಿ ನಡೆಸಿದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಮುಜರಾಯಿ ದೇವಸ್ಥಾನ ಹಾಗೂ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸ್ಥಳದಲ್ಲಿದ ಭದ್ರಾವತಿ ತಹಸೀಲ್ದಾರ್ ಪ್ರದೀಪ್‌ಗೆ ತಿಳಿಸಿದರು. ಗ್ರಾಮದಲ್ಲಿ ಅಶಾಂತಿ ನೆಲೆಸಲು ಬೀಡಬಾರದು. ಗ್ರಾಮಸ್ಥರಿಗೆ ಅನಾನೂಕುಲ ಉಂಟು ಮಾಡುವ ಅವಿವೇವಿಕೆಗಳಿಗೆ ಇಲಾಖೆ ತಕ್ಕ ಬುದ್ದಿ ಕಲಿಸುತ್ತದೆ. ದಾನವಾಡಿ ದೇವಸ್ಥಾನದ ಹೆಸರಿನಲ್ಲಿ ಯಾವುದೇ ಜಾತಿ ನಿಂದನೆ ಕೇಸ್‌ಗಳನ್ನು ದಾಖಲಿಸುವ ಮುನ್ನ ಠಾಣಾಧಿಕಾರಿಗಳು ಪೂರ್ವಪರ ಪರಿಶೀಲನೆ ನಡೆಸಲಾಗುವುದು. ಯಾರೋ ಬಂದು ದೂರು ನೀಡಿದ ಕೂಡಲೇ ಕ್ರಮ ಜರುಗಿಸುವುದಿಲ್ಲ ಎಂದರು.

ಗ್ರಾಮಾಂತರ ಶಾಸಕ ಕೆ.ಬಿ ಅಶೋಕ್, ಡಿವೈಎಸ್‌ಪಿ ಜಿತೇಂದ್ರ, ಶಾಂತಿ ಸಾಗರ ವಲಯ ಆರ್‌ಎಫ್‌ಓ ಜಿತೇಂದ್ರ ಕುಮಾರ್, ಸಿಪಿಐ ಮಂಜುನಾಥ್, ಪಿಎಸ್‌ಐ ಸಿದ್ದಪ್ಪ, ಭದ್ರಾವತಿ ತಹಸೀಲ್ದಾರ್ ಪ್ರದೀಪ್, ಮುಖಂಡರಾದ ಹೆಚ್.ಎಸ್ ಷಡಾಕ್ಷರಿ, ಅಣ್ಣಾಮಲೈ, ಬಸವರಾಜ್ ಸೇರಿದಂತೆ ದಾನವಾಡಿ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next