ಗುಡಿಬಂಡೆ: ತಾಲೂಕಿನಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಭೂಮಿ ಹಸನು ಮಾಡಿಕೊಂಡಿರುವ ರೈತರು ಸಂಪರ್ಕ ಕೇಂದ್ರಗಳಲ್ಲಿ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಬಹುದಾಗಿದೆ.
ಈ ಕುರಿತುಪತ್ರಿಕಾಹೇಳಿಕೆನೀಡಿರುವಸಹಾಯಕ ಕೃಷಿ ನಿರ್ದೇಶಕಿ ಅನೀಸ್ ಸಲ್ಮಾ, ಸರ್ಕಾರ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಪೂರೈಸಿದೆ. ಬೀಜದ ಜೊತೆಗೆ ರಸಗೊಬ್ಬರ ಸಹ ದಾಸ್ತಾನು ಮಾಡಲಾಗಿದೆ. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಆನ್‌ಲೈನ್ ಮೂಲಕ ಮೇ 31ರಿಂದಲೇವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ರೈತರು ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ತಮ್ಮ ಬೆಳೆಗೆ ವಿಮೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಹೋಬಳಿಯಲ್ಲೇ ಮಾರಾಟ: ಇದೇ ವೇಳೆ ತಾಂತ್ರಿಕ ಕೃಷಿ ಅಧಿಕಾರಿ ಶಂಕರಯ್ಯ ಮಾತನಾಡಿ,ರೈತರಿಗೆ ಅನುಕೂಲವಾಗಲು ಆಯಾ ಹೋಬಳಿ ವ್ಯಾಪ್ತಿಯಲ್ಲೇ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಎಲ್ಲಾ ವರ್ಗದ ರೈತರಿಗೆ ಗರಿಷ್ಠ2.0 ಹೆಕ್ಟೇರ್ ಅಥವಾ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತದೆ ಎಂದು ವಿವರಿಸಿದ್ದಾರೆ. ನಿಯಮ ಪಾಲಿಸಿ: ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ ಬಿತ್ತನೆ ಬೀಜ ಮಾರಾಟ ಮಾಡಲಿದ್ದು, ರೈತರು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಬಿತ್ತನೆ ಬೀಜ ಖರೀದಿಸಬೇಕು ಎಂದು ಹೇಳಿದರು.
ನೋಂದಣಿಗೆ ಅವಕಾಶ: ಈಗಾಗಲೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸರಾಸರಿ 97.80 ಮಿ.ಮೀ ಮಳೆಯಾಗಬೇಕಿತ್ತು. ಇಲ್ಲಿಯವರೆಗೂ ಶೇ.102ಮಿ.ಮೀ. ಆಗಿದೆ. ಕಸಬಾ ಹೋಬಳಿಯಲ್ಲಿ 99.10, ಸೋಮೇನಹಳ್ಳಿ ಹೋಬಳಿಯಲ್ಲಿ 99.73 ಮಳೆದಾಖಲಾಗಿದೆ. ಕೆಲವು ಗ್ರಾಮಗಳಲ್ಲಿ ಉಳುಮೆಕಾರ್ಯ ಪ್ರಾರಂಭವಾಗಿದೆ.ಬಿತ್ತನೆಬೀಜಪಡೆಯಲು ಪಹಣಿ, ಬ್ಯಾಂಕ್ ಪಾಸ್‌ಬುಕ್, ಆಧಾರ್ ನೀಡಬೇಕು. ಅಷ್ಟೇ ಅಲ್ಲದೇ, ಫ್ರೊಟ್ಸ್ ತಂತ್ರಾಂಶದಲ್ಲೂ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.
ಬಿತ್ತನೆ ಗುರಿ: ತಾಲೂಕಿನ ಕಸಬಾ ಹಾಗೂ ಸೋಮೇನಹಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ನೆಲಗಡಲೆ, ರಾಗಿ, ಮುಸುಕಿನ ಜೋಳ, ತೊಗರಿ, ಅಲಸಂದಿ, ತೃಣ ಧಾನ್ಯಗಳ ದಾಸ್ತಾನು ಮಾಡಲಾಗಿದೆ. ತಾಲೂಕಿನ10,025 ಹೆಕ್ಟೇರ್ ಮಳೆ ಆಶ್ರಿತ, ನೀರಾವರಿ 1435 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ನೀರಾವರಿ 16 ಹೆಕ್ಟೇರ್, ಮಳೆ ಆಶ್ರಿತ5 ಹೆಕ್ಟೇರ್‌ನಲ್ಲಿ ಬಿತ್ತನೆಕಾರ್ಯ ನಡೆದಿದೆ. ತಾಲೂಕಿನ ವಿವಿಧ ಮಳಿಗೆಗಳಲ್ಲಿ ರಸಗೊಬ್ಬರಗಳ ದಾಸ್ತಾನು ಆಗಿದ್ದು, ಯೂರಿಯಾ 92.44, ಡಿ.ಎ.ಪಿ 30.10, ಎಂ.ಒ.ಪಿ 12, ಎಸ್.ಎಸ್.ಪಿ 11.45, ಕಾಂಪ್ಲೆಕ್ಸ್ 156.97 ಒಟ್ಟು 305.28 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ.