Advertisement

ಕಲಬೆರಕೆ ಬಿತ್ತನೆ ಸಸಿ ವಿತರಣೆ: ಸಂಕಷ್ಟ

04:38 PM May 07, 2022 | Team Udayavani |

ಮುಳಬಾಗಿಲು: ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಕಲಬೆರಕೆ ರೇಷ್ಮೆ ವಿ-1 ಬಿತ್ತನೆ ಸಸಿಗಳಿಂದ ರೈತರಿಗೆ ಅನನುಕೂಲವಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ರೇಷ್ಮೆ ಇಲಾಖೆ ಸಹಾಯಕ ಕೆ.ವಿ.ಬಾಬು ಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯಾಧ್ಯಕ್ಷ ಅಬ್ಬಣಿ ಶ್ರೀನಿವಾಸ್‌, ತಾಲೂಕಿನ ಹನುಮನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊತ್ತಮಂಗಲ ಹಾಗೂ ಗುಮ್ಮಕಲ್ಲು ಗ್ರಾಪಂ ವ್ಯಾಪ್ತಿಯ ಶೆಟ್ಟಿಕಲ್ಲು ಗ್ರಾಮಗಳಲ್ಲಿ ರೈತರಿಗೆ ವಿತರಣೆ ಮಾಡಲೆಂದು ರೇಷ್ಮೆ ವಿ-1 ಬಿತ್ತನೆ ಸಸಿಗಳನ್ನು ಅರಣ್ಯ ಇಲಾಖೆಗಳಿಂದ ಬೆಳೆಸಿದ್ದು, ಅವು ರೈತರಿಗೆ ಮಾರಕವಾಗುವ ರೀತಿ ಇದೆ.

ರೈತರು ಒಂದು ಸಸಿಗೆ 37 ರೂ. ನೀಡಿ ಕೊಂಡು ನಾಟಿ ಮಾಡಿದರೆ ಸುಮಾರು ಶೇ.10ಕ್ಕಿಂತ ಉಳಿಯು ವುದು ತುಂಬಾ ಕಷ್ಟಕರವಾಗಿರುತ್ತದೆ, ಇನ್ನು ಶೇ.90 ನಾಶವಾಗು ವುದು ಖಚಿತ. ಇನ್ನು ಈ ರೇಷ್ಮೆ ಸಸಿಗಳು ಕಲಬೆರಕೆ ಆಗಿದ್ದು ರೈತರಿಗೆ ಅನುಕೂಲವಾಗುವಂತಹ ಪ್ಲಾಸ್ಟಿಕ್‌ ಚೀಲಗಳನ್ನು ಬಳಸದೇ ದೊಡ್ಡ ದೊಡ್ಡ ಚೀಲಗಳಲ್ಲಿ ಬೆಳೆಸಿರುವುದು ಸರ್ಕಾರಕ್ಕೆ ಯಾಮಾರಿಸುವ ಕೆಲಸವಾಗಿದೆ ಎಂದು ಆರೋಪಿಸಿದರು.

ಮುಳಬಾಗಿಲು ತಾಲೂಕು ರೈತ ಸಂಘದ ಅಧ್ಯಕ್ಷ ಪೆತ್ತಾಂಡ್ಲಹಳ್ಳಿ ಕೆ.ಎಸ್‌.ಗಂಗಾಧರ್‌, ತಾಲೂಕು ಉಪಾಧ್ಯಕ್ಷ ತಾತಿಕಲ್ಲು ಕೆ.ಎಸ್‌. ಸುರೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next