Advertisement

ಇಂದು ಚಿನ್ನದ ಬಾಂಡ್‌ 5ನೇ ಸರಣಿ ಬಿಡುಗಡೆ

03:08 AM Aug 03, 2020 | Hari Prasad |

ಹೊಸದಿಲ್ಲಿ: 2020-21ರ ಸವರನ್‌ ಗೋಲ್ಡ್‌ ಬಾಂಡ್‌ನ‌ (ಎಸ್‌ಜಿಬಿ) 5ನೇ ಸರಣಿ ಆ.3ಕ್ಕೆ ಬಿಡುಗಡೆಯಾ­ಗಲಿದೆ.
ಆ.11ರವರೆಗೆ ಚಂದಾದಾರಿಕೆ ಪಡೆಯಲು ಅವಕಾಶವಿದೆ.

Advertisement

ಇದನ್ನು ಅಂತರ್ಜಾಲದ ಮೂಲಕಕೊಳ್ಳುವವರಿಗೆ ಪ್ರತೀ ಗ್ರಾಮ್‌ ಮೇಲೆ 50 ರೂ. ವಿನಾಯ್ತಿ ಸಿಗುತ್ತದೆ.

1 ಗ್ರಾಮ್‌ ಎಸ್‌ಜಿಬಿ ಬೆಲೆ 5344 ರೂ. ಎಂದು ನಿಗದಿಯಾಗಿದೆ. ಗ್ರಾಹಕರು ಕನಿಷ್ಠ 1 ಗ್ರಾಮ್‌ ಕೊಳ್ಳಲೇಬೇಕು.

ಗರಿಷ್ಠ ಮಿತಿಯನ್ನು ಆರ್‌ಬಿಐ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಂಡು­ಕೊಳ್ಳಬೇಕಾಗು­ತ್ತದೆ. ವೈಯಕ್ತಿಕವಾಗಿ ಗರಿಷ್ಠ 4 ಕೆಜಿ ಕೊಳ್ಳಲು ಅವಕಾಶವಿದೆ. ಇತರೆ ಅರ್ಹಸಂಸ್ಥೆಗಳು 20 ಕೆಜಿವರೆಗೆ ಕೊಳ್ಳಬಹುದು.

ಯಾರಿಗೆ ಅರ್ಹತೆಯಿದೆ?: ಫೆಮಾ (ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ) ಅಡಿ ಅರ್ಹತೆ ಪಡೆ­ದಿರುವ ಪ್ರತೀ ಭಾರತೀಯರಿಗೂ ಎಸ್‌ಜಿಬಿ ಕೊಳ್ಳಲು ಅವಕಾಶವಿದೆ. ಆದರೆ ಅನಿವಾಸಿ ಭಾರತೀಯರಿಗೆ ಸಾಧ್ಯವಿಲ್ಲ. ಅವರಿಗೆ ನಾಮನಿರ್ದೇಶನಗೊಳ್ಳಲು ಮಾತ್ರ ಅವಕಾಶ.

Advertisement

ತೆರಿಗೆ?: ಎಸ್‌ಜಿಬಿ ಅವಧಿ 8 ವರ್ಷದವರೆಗೆ ಇರುತ್ತದೆ. ಅದು ಮುಗಿದ ಮೇಲೆಯೇ ಹಣ ಪಡೆದರೆ ತೆರಿಗೆ ಕಟ್ಟುವ ಪ್ರಶ್ನೆಯಿಲ್ಲ. ಇನ್ನು ಐದು ವರ್ಷ ಮುಗಿದ ಮೇಲೆಯೂ ಹಣ ಹಿಂಪಡೆಯ­ಬಹುದು. ಒಟ್ಟಾರೆ ಅವಧಿಗೆ ಮುನ್ನ ಹಣ ಪಡೆದರೆ, ಅದಕ್ಕೆಂದೇ ನಿಗದಿಯಾಗಿರುವ ಪ್ರಮಾಣದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ.

ಬೆಲೆ ನಿಗದಿ ಹೇಗೆ?
ಭಾರತೀಯ ಬುಲಿಯನ್‌ ಹಾಗೂ ಆಭರಣ ಸಂಸ್ಥೆ­ಯಲ್ಲಿ ದಾಖಲಾದ ಕಡೆಯ ಮೂರು ದಿನದ ಶುದ್ಧ ಚಿನ್ನದ ಬೆಲೆಯ ಸರಾಸರಿಯನ್ನು ಪರಿಗಣಿಸಲಾಗುತ್ತದೆ. ಈ ಪ್ರಕಾರ 1 ಗ್ರಾಮ್‌ ಬೆಲೆಯನ್ನು ನಿರ್ಧರಿಸಿ ಬಾಂಡ್‌ ಬಿಡುಗಡೆ ಮಾಡಲಾಗಿದೆ. ಬಾಂಡ್‌ನ‌ ಅವಧಿ ಮುಗಿದ ಮೇಲೆ ಆಗ ಮಾರುಕಟ್ಟೆಯಲ್ಲಿ ಎಷ್ಟು ಮೌಲ್ಯವಿರು­ತ್ತದೋ ಅಷ್ಟು ಹಣವನ್ನು ನೀಡಲಾಗುತ್ತದೆ.

ಎಷ್ಟು ಸುರಕ್ಷಿತ?
ಎಸ್‌ಜಿಬಿಗೆ ಸಂಪೂರ್ಣ ಆರ್‌ಬಿಐ ಸುರಕ್ಷತೆಯಿರುತ್ತದೆ. ಆದ್ದರಿಂದ ಯಾವುದೇ ಹಂತದಲ್ಲೂ ಭಯಪಡುವ ಅಗತ್ಯ­ವಿಲ್ಲ. ಇನ್ನು ವಾರ್ಷಿಕವಾಗಿ ಶೇ.2.5ರಷ್ಟು ಬಡ್ಡಿ ಬರುತ್ತದೆ. ಅದಕ್ಕೂ ಮಿಗಿಲಾಗಿ ನಾವು ಚಿನ್ನದ ಮೌಲ್ಯದ ಬಾಂಡ್‌ ಕೊಂಡಿರುತ್ತೇವೆಯೇ ಹೊರತು ಚಿನ್ನವನ್ನಲ್ಲ. ಆದ್ದರಿಂದ ಕಳ್ಳತನವಾಗುವ ಭೀತಿಯಿಲ್ಲ. ಜೊತೆಗೆ ಆಭರಣ ಕೊಳ್ಳುವಾಗ ಇರುವ ಮೇಕಿಂಗ್‌ ಚಾರ್ಜಸ್‌, ಜಿಎಸ್‌ಟಿ ಇತ್ಯಾದಿ ತಾಪತ್ರಯವಿರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next