Advertisement
ಈ ಬಾರಿ ಆರ್‌ಬಿಐ ನಿಗದಿಗೊಳಿಸಿರುವ ಚಿನ್ನದ ಬಾಂಡ್ ಬೆಲೆ ಮಾರುಕಟ್ಟೆಯ ನೈಜ ಬೆಲೆಗಿಂತ ಕಡಿಮೆಯಾಗಿದೆ. ಇದಕ್ಕೆ ನಿರಂತರವಾಗಿ ಏರುತ್ತಿರುವ ಧಾರಣೆಯೇ ಕಾರಣವಾಗಿದೆ. ಆನ್‌ಲೈನ್ ಮೂಲಕ ಸವರಿನ್ ಗೋಲ್ಡ್ ಬಾಂಡ್‌ಗೆ ನೋಂದಾಯಿಸುವವರಿಗೆ ಹಾಗೂ ಡಿಜಿಟಲ್ ಪಾವತಿ ಮಾಡುವ ಗ್ರಾಹಕರಿಗೆ ಪ್ರತಿ ಗ್ರಾಂ.ಗೆ 50 ರೂ. ಗಳ ರಿಯಾಯಿತಿ ನೀಡಲಾಗುತ್ತದೆ. ಅಂಥ ಹೂಡಿಕೆದಾರರಿಗೆ ಪ್ರತಿ ಗ್ರಾಂ.ಗೆ 5,127 ರೂ. ದರದಲ್ಲಿ ಬಾಂಡ್ ಲಭಿಸಲಿದೆ. ಇಂಥ ಬಾಂಡ್‌ಗಳನ್ನು ಡಿಮ್ಯಾಟ್ ರೂಪಕ್ಕೆ ಪರಿವರ್ತಿಸಬಹುದಾಗಿದೆ.
Related Articles
Advertisement
ಏನಿದು ಬಾಂಡ್?ಎಸ್‌ಜಿಬಿ ಆರ್‌ಬಿಐನ ಬಾಂಡ್ ಆಗಿದೆ. ಬಾಂಡ್ ಮೌಲ್ಯವನ್ನು ಚಿನ್ನದ ಮಾರುಕಟ್ಟೆಯ ಮೂಲಕ ಅಳೆಯಲಾಗುತ್ತದೆ. ಬಾಂಡ್ 5 ಗ್ರಾಂ. ಚಿನ್ನದ್ದಾಗಿದ್ದರೆ, ಐದು ಗ್ರಾಂ ಚಿನ್ನದ ಬೆಲೆ ಬಾಂಡ್ ಬೆಲೆಗೆ ಸಮನಾಗಿರುತ್ತದೆ. ಮೆಚ್ಯುರಿಟಿ ಬಳಿಕ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ವೇಳೆ ಕಡೆಯ 3 ಕೆಲಸದ ದಿನಗಳ ದರವನ್ನು ಮಾನ ದಂಡವನ್ನಾಗಿಟ್ಟುಕೊಂಡು ಅದರ ಸರಾಸರಿ ದರವನ್ನು ಅನ್ವಯಿಸಿ ಬಾಂಡ್‌ನ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಇದಕ್ಕೆ ವಾರ್ಷಿಕ ಶೇ. 2.50ರ ಬಡ್ಡಿ ದರವೂ ಇದ್ದು, ತೆರಿಗೆ ವಿನಾಯಿತಿಯನ್ನೂ ಹೊಂದಿದೆ.