ನವ ದೆಹಲಿ : ಗೋಲ್ಡ್ ಬಾಂಡ್ ಗಳನ್ನು ಎಲ್ಲಿ ಖರೀದಿಸಬಹುದು ಪ್ರತಿ SGB ಅಪ್ಲಿಕೇಶನ್‌ನೊಂದಿಗೆ ಹೂಡಿಕೆದಾರರ PAN ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು. ಚಿನ್ನದ ಬಾಂಡ್‌ಗಳನ್ನು ಬ್ಯಾಂಕುಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳು (NSE ಮತ್ತು BSE) ಮೂಲಕ ಮಾರಾಟ ಮಾಡಲಾಗುತ್ತದೆ.
ಎಷ್ಟು ಹೂಡಿಕೆ ಮಾಡಬಹುದು?
ಈ ಯೋಜನೆಯಡಿಯಲ್ಲಿ, ವೈಯಕ್ತಿಕ ಹೂಡಿಕೆದಾರರು ಮತ್ತು ಹಿಂದೂ ಅವಿಭಾಜ್ಯ ಕುಟುಂಬಗಳು ಆರ್ಥಿಕ ವರ್ಷದಲ್ಲಿ ಕನಿಷ್ಠ ಒಂದು ಗ್ರಾಂ ಮತ್ತು ಗರಿಷ್ಠ ನಾಲ್ಕು ಕಿಲೋಗ್ರಾಂ ಚಿನ್ನದಲ್ಲಿ ಹೂಡಿಕೆ ಮಾಡಬಹುದಾಗಿದೆ. ಟ್ರಸ್ಟ್ ಮತ್ತು ಇಂತಹ ಇತರ ಘಟಕಗಳು ಪ್ರತಿವರ್ಷ 20 ಕೆಜಿ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಚಿನ್ನದ ಬಾಂಡ್ ಗಳನ್ನು ಬ್ಯಾಂಕುಗಳು, ಭಾರತದ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಗಳು, ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಷೇರು ವಿನಿಮಯ ಕೇಂದ್ರಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಗೋಲ್ಡ್ ಬಾಂಡ್ ಹೂಡಿಕೆಯ ಮೆಚುರಿಟಿ ತೆರಿಗೆ ಮುಕ್ತವಾಗಿರುತ್ತದೆ. ಅಲ್ಲದೆ ಭಾರತ ಸರ್ಕಾರಕ್ಕೆ ಕೊಡಲ್ಪಟ್ಟಿರುವ ಕಾರಣ ಡಿಫಾಲ್ಟ್ ಬಗ್ಗೆ ಚಿಂತೆ ಬೇಕಾಗಿಲ್ಲ. ಹೀಗಾಗಿ ಮ್ಯಾಚ್ಯೂರಿಟಿವರೆಗೆ ಕಾಯ್ದರೆ, ಕ್ಯಾಪಿಟಲ್ ಗೆನ್ಸ್ ತೆರಿಗೆ ಕೂಡ ಇರುವುದಿಲ್ಲ. ಇಕ್ವಿಟಿ ಮೇಲೆ ಶೇ.10ರಷ್ಟು ಕ್ಯಾಪಿಟಲ್ ಗೆನ್ಸ್ ತೆರಿಗೆ ಇರಲಿದೆ. ಹೀಗಾಗಿ ದೀರ್ಘಾವಧಿ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆ ಇದಾಗಿದೆ. ಇದೊಂದು ಸುರಕ್ಷಿತ ಹೂಡಿಕೆಯಾಗಿದೆ. ಚಿನ್ನದ ಶುದ್ಧತೆಯನ್ನು ಪರಿಶೀಲಿಸುವ ಅವಶ್ಯಕತೆ ಕೂಡ ಇಲ್ಲ. ಇದರ ಮೇಲೆ ನೀವು ಸಾಲವನ್ನು ಕೂಡ ಪಡೆಯಬಹುದಾಗಿದೆ.
ಓದಿ : ಬಿಜೆಪಿ ಅಧಿಕಾರಕ್ಕೆ ಬಂದರೆ ಕೇರಳದ ಮುಖ್ಯಮಂತ್ರಿಯಾಗಲು ಸಿದ್ಧ : ‘ಮೆಟ್ರೋ ಮ್ಯಾನ್’ ಶ್ರೀಧರನ್