Advertisement

ನೈಋತ್ಯ ಕ್ಷೇತ್ರ; ಬಿಜೆಪಿ- ಜೆಡಿಎಸ್‌ ಒಮ್ಮತದ ಅಭ್ಯರ್ಥಿಗೆ ಗೆಲುವು: ಡಾ| ಧನಂಜಯ ಸರ್ಜಿ

12:48 AM May 20, 2024 | Team Udayavani |

ಮಂಗಳೂರು: ನೈಋತ್ಯ ಪದವೀಧರರ ಕ್ಷೇತ್ರ ಬಿಜೆಪಿ ಸಂಘಟನಾ ಶಕ್ತಿಯ ಕ್ಷೇತ್ರ. 14 ಮೆಡಿಕಲ್‌ ಕಾಲೇಜು, 30 ಎಂಜಿನಿಯರಿಂಗ್‌ ಹಾಗೂ 100ಕ್ಕೂ ಅಧಿಕ ಪದವಿ ಕಾಲೇಜುಗಳು ಇಲ್ಲಿವೆ.

Advertisement

ಅಭಿವೃದ್ಧಿಯಲ್ಲಿ ಮುಂಚೂಣಿ ಯಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಒಮ್ಮತದ ಅಭ್ಯರ್ಥಿಯಾಗಿ ನನಗೆ ಅವಕಾಶ ದೊರಕಿದ್ದು ಗೆಲುವು ನಿಶ್ಚಿತ ಎಂದು ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬದಲಾಗುತ್ತಿರುವ ಕಾಲಘಟ್ಟ ದಲ್ಲಿ ಪದವೀಧರರ ಹಿತ ಕಾಪಾ ಡಲು ಕಂಕಣ ಬದ್ಧನಾಗಿದ್ದೇನೆ ಎಂದರು.

“ತಲೆಕೆಡಿಸಿಕೊಳ್ಳುವುದಿಲ್ಲ’
ಹರ್ಷಾ ಕೊಲೆ ಪ್ರಕರಣದಲ್ಲಿ ಎಡಪಂಥೀಯ ಸಂಘಟನೆಯ ಜತೆ ಸೇರಿ ನಡೆಸಿದ ಪ್ರತಿಭಟನೆ ಹಾಗೂ ಬಿಜೆಪಿಯ ಜೂನಿಯರ್‌ ಲೀಡರ್‌ ಎಂಬ ಪ್ರತಿಸ್ಪರ್ಧಿ ಅಭ್ಯರ್ಥಿ ಆರೋಪ ಇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಾ| ಸರ್ಜಿ “ನಾನು 10ನೇ ವಯಸ್ಸಿನಿಂದ ಆರೆಸ್ಸೆಸ್‌ ಸ್ವಯಂಸೇವಕನಾಗಿ ಬೆಳೆದು 30 ವರ್ಷ
ಗಳಿಂದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿದ್ದೇನೆ. ಆಪಾದನೆ ಹಾಗೂ ಅಭ್ಯರ್ಥಿಗಳ ಬಂಡಾಯ ಬಗ್ಗೆ ನಾನು ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಕಾಂಗ್ರೆಸ್‌ನಿಂದ ಅವಗಣನೆ
ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಭೋಜೇಗೌಡ ಮಾತನಾಡಿ, ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಅವಗಣಿಸುತ್ತಿದೆ. ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ಸಂದರ್ಭ ಮಾಸ್‌ ಕಾಪಿ ಆಗುತ್ತಿದ್ದು, ನಿಜವಾಗಿ ಉತ್ತಮ ಶಿಕ್ಷಣ ನೀಡುತ್ತಿದ್ದ ನೈಋತ್ಯ ಕ್ಷೇತ್ರದ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿತ್ತು. ಈ ಬಗ್ಗೆ ನಾನು ಪರಿಷತ್‌ನಲ್ಲಿ ಪ್ರಶ್ನೆ ಮಾಡಿ ಅದು ಚರ್ಚೆಯಾದ ಕಾರಣ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ ಎಂದರು.

Advertisement

ಒಮ್ಮತದ ಅಭ್ಯರ್ಥಿಗೆ ಗೆಲುವು
ಬಿಜೆಪಿ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನೈಋತ್ಯ ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಈ ಅಭ್ಯರ್ಥಿಗಳ ಗೆಲುವಿಗೆ ಎಲ್ಲರು ಜತೆಗೂಡಿ ಸಹಕಾರ ನೀಡಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ,ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ, ಪ್ರತಾಪ್‌ಸಿಂಹ ನಾಯಕ್‌, ದ.ಕ. ಲೋಕಸಭಾ ಅಭ್ಯರ್ಥಿ ಕ್ಯಾ| ಬ್ರಿಜೇಶ್‌ ಚೌಟ, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್‌. ದತ್ತಾತ್ರಿ, ಕ್ಯಾ| ಗಣೇಶ್‌ ಕಾರ್ಣಿಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next