ಮೈಸೂರು: ವಿವಿಧ ಬೇಡಿಕೆ ಈಡೇರಿಸು ವಂತೆ ಒತ್ತಾಯಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಸಂಘದಿಂದ ಗಮನ ಸೆಳೆಯುವ ದಿನ ಎಂಬ ಘೋಷ ವಾಕ್ಯ ದೊಂದಿಗೆ ಪ್ರತಿಭಟನೆ ನಡೆಸಲಾಯಿತು. ಮೈಸೂರು ರೈಲ್ವೆ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯಲ್ಲಿ, ರೈಲ್ವೆ ಉತ್ಪಾದನಾ ಘಟಕ ಮತ್ತು ಸ್ಟಾಪ್ ಖಾಸಗೀಕರಣ, ಹೊರಗುತ್ತಿಗೆ ಪದ್ಧತಿ, ಶಾಶ್ವತ ಮತ್ತು ದೀರ್ಘಕಾಲಿಕ ಉದ್ಯೋಗಗಳ ನಿರ್ಧಾರಗಳನ್ನು ರದ್ದುಗೊಳಿಸ ಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರಿ ನೌಕರರ, ಪಿಂಚಣಿ ದಾರರ 3 ಕಂತುಗಳ ಡಿಎ, ಡಿಆರ್‌ನ್ನು ಬಿಡುಗಡೆ ಮಾಡಬೇಕು, ಕನಿಷ್ಠ ವೇತನ, ಪಿಟ್‌ಮೆಂಟ್ ಫಾರ್ಮುಲಾ ಸೇರಿ 7ನೇ ಸಿಪಿಸಿ ಬೇಡಿಕೆಗಳ ಮೇಲೆ ಮಂತ್ರಿಮಂಡಲ ನೀಡಿದ ಆಶ್ವಾಸನೆಗಳನ್ನು ಜಾರಿಗೊಳಿಸಬೇಕು. 7ನೇ ಸಿಪಿಸಿ ವೈಪರೀತ್ಯ ಬದಲಿಸಲು ಇನ್ನೂ ಒಂದು ಬಾರಿ ಅವಕಾಶ ವಿಸ್ತರಿಸುವುದು,ಕೆಲವು ಭತ್ಯೆಗಳು ಮತ್ತು ಮುಂಗಡಗಳ ಮರುಸ್ಥಾಪನೆ ಮತ್ತು ಬಡ್ತಿ, ಎಂಎಸಿಪಿಎಸ್ ಎರಡು ಇನ್‌ಕ್ರಿಮೆಂಟ್ ಮಂಜೂರು ಮಾಡಬೇಕೆಂದರು.
ಹೊಸ ಪಿಂಚಣಿ ಪದ್ಧತಿ ರದ್ದು ಮಾಡಿ ಗ್ಯಾರಂಟಿ ಪಿಂಚಣಿ ಜಾರಿಗೊಳಿಸಬೇಕು. ಎಫ್ ಆರ್ 56(ಜೆ) ಶಿಕ್ಷೆಯ ದುರ್ಬಳಕೆ ಆಗುತ್ತಿರುವುದರಿಂದ ಇದನ್ನು ಹಿಂಪಡೆಯ ಬೇಕು. ಸ್ಥಾಯಿ ಸಮಿತಿ ಸಭೆಯಲ್ಲಿ ಮತ್ತು ಎನ್‌ಸಿಜೆಸಿಎಂನ 47 ನೇ ಸಭೆಯಲ್ಲಿ ಒಪ್ಪಿದ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಆದೇಶ ನೀಡ ಬೇಕು. ಕೋವಿಡ್ ಸೋಂಕಿ ನಿಂದ ಮೃತಪಟ್ಟ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರ ಪರಿಹಾರವನ್ನು ಪಾವತಿ ಮಾಡಬೇಕು.
ಇದನ್ನೂ ಓದಿ:ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ: ದೂರು
ಮೃತ ನೌಕರರಮತ್ತು ವೈದ್ಯಕೀಯವಾಗಿ ಸೇವೆಯಿಂದ ಅಮಾನ್ಯವಾಗಿರುವ ನೌಕರರ ಅವಲಂಬಿಗಳಿಗೆ ಶೇ.100 ಸಹಾನುಭೂತಿ ನೇಮಕಾತಿ ಖಚಿತಪಡಿಸಬೇಕು. ಯಾವುದೇ ಮೂಲ ವೇತನ ಸೀಲಿಂಕಿಗ್ ಮಿತಿಯಿಲ್ಲದೆ ರಾತ್ರಿ ಪಾಳಿ ಕರ್ತವ್ಯದಲ್ಲಿರುವ ನೌಕರರಿಗೆ ರಾತ್ರಿ ಕರ್ತವ್ಯ ಭತ್ಯೆ ಕೊಡಬೇಕು ಎಂದು ಒತ್ತಾಯಿಸಿದರು. ವಿಭಾಗೀಯ ಅಧ್ಯಕ್ಷ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.