ಮೈಸೂರು: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯಿದು. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಮೈಸೂರಿಗೆ ಆಗಮಿಸಿದೆ. ಚೆನ್ನೈ-ಬೆಂಗಳೂರು- ಮೈಸೂರು ನಡುವಿನ ವಂದೇ ಭಾರತ್ ರೈಲಿನ ಪ್ರಥಮ ಸುತ್ತಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
ಚೆನ್ನೈನಲ್ಲಿ ಬೆಳಗ್ಗೆ 5.50ಕ್ಕೆ ಹೊರಟ ರೈಲು ಮಧ್ಯಾಹ್ನ 12.13ಕ್ಕೆ ಮೈಸೂರಿಗೆ ಆಗಮಿಸಿದೆ. ಬೆಂಗಳೂರು ಮಾರ್ಗವಾಗಿ ರೈಲು ಮೈಸೂರಿಗೆ ಬಂದಿದ್ದು, ನೈರುತ್ಯ ರೈಲ್ವೆ ಅಧಿಕಾರಿಗಳು ರೈಲಿನೊಂದಿಗೆ ಬಂದಿಳಿದರು.
16 ಕೋಚ್ ಗಳನ್ನು ಹೊಂದಿರುವ ವಂದೇ ಭಾರತ್ ರೈಲಿನಲ್ಲಿ 1128 ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ರೈಲು ಸಂಪೂರ್ಣ ಸಿಸಿಟಿವಿ ಕಣ್ಗಾವಲ್ಲಿನಲ್ಲಿರುತ್ತದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ. 11ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ಅಧಿಕೃತ ಚಾಲನೆ ಕೊಡಲಿದ್ದಾರೆ.
Related Articles
ಇದನ್ನೂ ಓದಿ:ದನುಷ್ಕಾ ಗುಣತಿಲಕರನ್ನು ಎಲ್ಲಾ ಮಾದರಿ ಕ್ರಿಕೆಟ್ ನಿಂದ ಅಮಾನತು ಮಾಡಿದ ಲಂಕಾ ಬೋರ್ಡ್
ದೇಶದ ಅತ್ಯಂತ ವೇಗದ ರೈಲು ಇದಾಗಿದ್ದು, ಶತಾಬ್ದಿ ಎಕ್ಸ್ ಪ್ರೆಸ್ ಗಿಂತ ಶರವೇಗದಲ್ಲಿ ಸಂಚರಿಸಲಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಗರಿಷ್ಠ 160 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸುತ್ತದೆ. ರೈಲಿನ ಎಲ್ಲಾ ಕೋಚ್ ಗಳು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದೆ. ಅಲ್ಲದೆ ಜಿಪಿಎಲ್ -ಆಧಾರಿತ ಆಡಿಯೋ-ವಿಡಿಯೋ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಗಳಿಗಾಗಿ ಆನ್ಬೋರ್ಡ್ ಹಾಟ್ಸ್ಪಾಟ್ ವೈ-ಫೈ ಮತ್ತು ಅತ್ಯಂತ ಆರಾಮದಾಯಕ ಆಸನ ವ್ಯವಸ್ಥೆ ಹೊಂದಿದೆ.