Advertisement

ದಕ್ಷಿಣ ಭಾರತೀಯರಿಗೆ ಧೈರ್ಯ ಕಡಿಮೆ!

10:38 AM Sep 17, 2019 | sudhir |

ಬೆಂಗಳೂರು: ‘ದಕ್ಷಿಣ ಭಾರತದವರು ಬುದ್ಧಿವಂತರು, ಕೌಶಲ ಹೊಂದಿರುವವರು. ಆದರೆ ತಮಗಾದ ಅನ್ಯಾಯ, ಹಕ್ಕನ್ನು ಕೇಳಲು ಧೈರ್ಯವಿಲ್ಲದವರು…’

Advertisement

ಇದು ರಾಜ್ಯಪಾಲ ವಿ.ಆರ್‌.ವಾಲಾ ಅವರ ಹೇಳಿಕೆ. ಭಾರತರತ್ನ ಸರ್‌ಎಂ. ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳು ಭ್ರಷ್ಟಾಚಾರ ಮಾಡುತ್ತಿದ್ದರೂ ಅದನ್ನು ಪ್ರಶ್ನಿಸುವುದಿಲ್ಲ. ಹೀಗಾಗಿಯೇ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುತ್ತಾರೆ. ಹಣದ ಬದಲಿಗೆ ಚಿನ್ನಾಭರಣದ ರೂಪದಲ್ಲಿ ಲಂಚ ಪಡೆಯುತ್ತಿದ್ದಾರೆ. ಲಂಚ ಕೇಳುವವರ ವಿರುದ್ಧ ಸರಕಾರದ ಮಟ್ಟದಲ್ಲಿ ದೂರು ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.

ಜಿಎಸ್‌ಟಿ ಜಾರಿಯಾದ ಅನಂತರ ಅಧಿಕಾರಿಗಳು ಇಲ್ಲಸಲ್ಲದ ಕಾರಣಗಳಿಗೆ ಲಂಚ ಪಡೆಯುತ್ತಿದ್ದಾರೆ. ಲಂಚ ಕೇಳುವ ಅಧಿಕಾರಿಗಳ ಬಗ್ಗೆ ಎಚ್ಚರ ವಹಿಸಿ ಎಂದರು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ಕಾನೂನು ಪರಿಪಾಲನೆ ಮಾಡಬೇಕು. ಅದು ಮುಖ್ಯಮಂತ್ರಿಗಳ ಮಗನಾದರೂ ಪ್ರಭಾವಿ ರಾಜಕಾರಣಿಯಾದರೂ ಸರಿ. ತಪ್ಪು ಯಾರೇ ಮಾಡಿದರೂ ತಪ್ಪೇ. ಅಂತಹವರಿಗೆ ಶಿಕ್ಷೆ ಆಗೇ ಆಗುತ್ತದೆ ಎಂದು ರಾಜ್ಯದ ಮಾಜಿ ಸಚಿವರೊಬ್ಬರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next