Advertisement
ಆತಿಥೇಯ ನೇಪಾಲ 101 ಪದಕಗ ಳೊಂದಿಗೆ ದ್ವಿತೀಯ ಸ್ಥಾನಿಯಾಗಿದೆ (36 ಚಿನ್ನ, 27 ಬೆಳ್ಳಿ, 38 ಕಂಚು). ಲಂಕಾ 107 ಪದಕ ಜಯಿಸಿದರೂ ಚಿನ್ನದಲ್ಲಿ ಹಿಂದುಳಿದು (17) 3ನೇ ಸ್ಥಾನ ಪಡೆದಿದೆ. ಗುರುವಾರ ಭಾರತ 30 ಚಿನ್ನ, 18 ಬೆಳ್ಳಿ,8 ಕಂಚಿನ ಪದಕಗಳನ್ನು ಜಯಿಸಿತು.
ಈಜು ಸ್ಪರ್ಧೆಯಲ್ಲಿ ಭಾರತ 11 ಪದಕಗಳನ್ನು ಬಾಚಿತು. ಇದರಲ್ಲಿ 4 ಚಿನ್ನ, 6 ಬೆಳ್ಳಿ, ಒಂದು ಕಂಚು ಸೇರಿದೆ. ಲಿಕಿತ್ ಸೆಲ್ವರಾಜ್ ಪ್ರೇಮ ಪುರುಷರ 200 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ, ಅಪೇಕ್ಷಾ ಡೆಲಿಲಾ ಫೆರ್ನಾಂಡಿಸ್ ವನಿತಾ 200 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಹಾಗೂ ದಿವ್ಯಾ ಸತಿಜಾ ವನಿತಾ 100 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಮೊದಲ ಸ್ಥಾನ ಅಲಂಕರಿಸಿದರು. ಬಳಿಕ ವನಿತಾ 400 ಮೀ. ಫ್ರೀಸ್ಟೈಲ್ ರಿಲೇ ತಂಡವೂ ಚಿನ್ನ ಗೆದ್ದಿತು.
Related Articles
Advertisement
ಆ್ಯತ್ಲೆಟಿಕ್ಸ್‌ನಲ್ಲಿ ಒಂದು ಚಿನ್ನ ಸಹಿತ 6 ಪದಕಗಳನ್ನು ಭಾರತ ಬುಟ್ಟಿಗೆ ಹಾಕಿಕೊಂಡಿತು. ಏಕೈಕ ಬಂಗಾರ ಟ್ರಿಪಲ್ ಜಂಪರ್ ಕಾರ್ತಿಕ್ ಉನ್ನಿಕೃಷ್ಣನ್ ಪಾಲಾಯಿತು.
ಫುಟ್‌ಬಾಲ್: ವನಿತೆಯರಿಗೆ ಜಯಫುಟ್ಬಾಲ್ನಲ್ಲಿ ಅಮೋಘ ಸಾಧನೆ ಮುಂದುವರಿಸಿದ ಭಾರತದ ವನಿತೆಯರು ಗುರುವಾರ ಶ್ರೀಲಂಕಾವನ್ನು 6-0 ಅಂತರದಿಂದ ಮಣಿಸಿದರು.