Advertisement
ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯವನ್ನು 48 ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನಕ್ಕೆ ಗಳಿಸಲು ಸಾಧ್ಯವಾದದ್ದು 34.1 ಓವರ್‌ಗಳಲ್ಲಿ 125 ರನ್ ಮಾತ್ರ. ಇದನ್ನು ನಿಧಾನ ಗತಿಯಲ್ಲಿ ಬೆನ್ನಟ್ಟಿದ ಆಫ್ರಿಕಾ 28.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 131 ರನ್ ಬಾರಿಸಿತು.
ಇದು 5 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಸಾಧಿಸಿದ ಮೊದಲ ಜಯ. ಸತತ 3 ಸೋಲುಂಡ ಡು ಪ್ಲೆಸಿಸ್ ಪಡೆಗೆ ವೆಸ್ಟ್ ಇಂಡೀಸ್ ಪಂದ್ಯದ ವೇಳೆ ಮಳೆ ಎದುರಾಗಿತ್ತು. ಹೀಗಾಗಿ ಅಂಕವನ್ನು ಹಂಚಲಾಗಿತ್ತು. ಕೂಟದ ಅಪಾಯಕಾರಿ ತಂಡವೆಂದೇ ಗುರುತಿಸಲ್ಪಟ್ಟಿದ್ದ ಅಫ್ಘಾನಿಸ್ಥಾನ ಈವರೆಗೆ ಯಾವುದೇ ಮ್ಯಾಜಿಕ್ ಮಾಡುವಲ್ಲಿ ಯಶಸ್ವಿಯಾಗಿಲ್ಲ. ಆಡಿದ ನಾಲ್ಕೂ ಪಂದ್ಯಗಳನ್ನು ಸೋತಿದ್ದು, ನಿರ್ಗಮನದ ಬಾಗಿಲಲ್ಲಿ ನಿಂತಿದೆ. ಚೇಸಿಂಗ್ ವೇಳೆ ಹಾಶಿಮ್ ಆಮ್ಲ-ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟಿಗೆ ಶತಕದ ಜತೆಯಾಟ ದಾಖಲಿಸಿದರು. 22.5 ಓವರ್‌ಗಳಿಂದ 104 ರನ್ ಪೇರಿಸಿದರು. ಡಿ ಕಾಕ್ 72 ಎಸೆತಗಳಿಂದ 68 ರನ್ ಹೊಡೆದರೆ (8 ಬೌಂಡರಿ), ಆಮ್ಲ 83 ಎಸೆತ ನಿಭಾಯಿಸಿ 41 ರನ್ ಮಾಡಿದರು (4 ಬೌಂಡರಿ). ಅಫ್ಘಾನಿಸ್ಥಾನದ ಆರಂಭ ಹೊರತುಪಡಿ ಸಿದರೆ ಉಳಿದಂತೆ ಬ್ಯಾಟಿಂಗ್ ಸರದಿ ಬಿಗಡಾ ಯಿಸುತ್ತಲೇ ಹೋಯಿತು. ಜಜಾಯ್-ಜದ್ರಾನ್ ಮೊದಲ ವಿಕೆಟಿಗೆ 39 ರನ್ ಗಳಿಸಿದ್ದೇ ತಂಡದ ದೊಡ್ಡ ಜತೆಯಾಟ. ಇಮ್ರಾನ್ ತಾಹಿರ್ 4, ಕ್ರಿಸ್ ಮಾರಿಸ್ 3, ಫೆಲುಕ್ವಾಯೊ 2 ವಿಕೆಟ್ ಹಾರಿಸಿದರು.
Related Articles
Advertisement
ಅಫ್ಘಾನಿಸ್ಥಾನಹಜ್ರತುಲ್ಲ ಜಜಾಯ್ ಸಿ ಡುಸೆನ್ ಬಿ ರಬಾಡ 22
ನೂರ್ ಅಲಿ ಜದ್ರಾನ್ ಬಿ ತಾಹಿರ್ 32
ರಹಮತ್ ಶಾ ಎಲ್‌ಬಿಡಬ್ಲ್ಯು ಮಾರಿಸ್ 6
ಹಶ್ಮತುಲ್ಲ ಶಾಹಿದಿ ಸಿ ಡು ಪ್ಲೆಸಿಸ್ ಬಿ ಫೆಲುಕ್ವಾಯೊ 8
ಅಸYರ್ ಅಫ್ಘಾನ್ ಸಿ ಮತ್ತು ಬಿ ತಾಹಿರ್ 0
ಮೊಹಮ್ಮದ್ ನಬಿ ಬಿ ಫೆಲುಕ್ವಾಯೊ 1
ಇಕ್ರಮ್ ಅಲಿ ಖೀಲ್ ಸಿ ಆಮ್ಲ ಬಿ ಮಾರಿಸ್ 9
ಗುಲ್ಬದಿನ್ ನೈಬ್ ಸಿ ಮಾರ್ಕ್‌ರಮ್ ಬಿ ತಾಹಿರ್ 5
ರಶೀದ್ ಖಾನ್ ಸಿ ಡುಸೆನ್ ಬಿ ತಾಹಿರ್ 35
ಹಮಿದ್ ಹಸನ್ ಸಿ ಡು ಪ್ಲೆಸಿಸ್ ಬಿ ಮಾರಿಸ್ 0
ಅಫ್ತಾಬ್ ಆಲಂ ಔಟಾಗದೆ 0
ಇತರ 7
ಒಟ್ಟು (34.1 ಓವರ್‌ಗಳಲ್ಲಿ ಆಲೌಟ್) 125
ವಿಕೆಟ್ ಪತನ: 1-39, 2-56, 3-69, 4-69, 5-70, 6-70, 7-77, 8-111, 9-125.
ಬೌಲಿಂಗ್: ಕಾಗಿಸೊ ರಬಾಡ 8-1-36-1
ಬ್ಯೂರನ್ ಹೆಂಡ್ರಿಕ್ಸ್ 5-1-25-0
ಆ್ಯಂಡಿಲ್ ಫೆಲುಕ್ವಾಯೊ 8-1-18-2
ಕ್ರಿಸ್ ಮಾರಿಸ್ 6.1-2-13-3
ಇಮ್ರಾನ್ ತಾಹಿರ್ 7-0-29-4
ದಕ್ಷಿಣ ಆಫ್ರಿಕಾ
(ಗುರಿ: 48 ಓವರ್‌ಗಳಲ್ಲಿ 127 ರನ್)
ಹಾಶಿಮ್ ಆಮ್ಲ ಔಟಾಗದೆ 41
ಕ್ವಿಂಟನ್ ಡಿ ಕಾಕ್ ಸಿ ನಬಿ ಬಿ ನೈಬ್ 68
ಫೆಲುಕ್ವಾಯೊ ಔಟಾಗದೆ 17
ಇತರ 5
ಒಟ್ಟು (28.4 ಓವರ್‌ಗಳಲ್ಲಿ ಒಂದು ವಿಕೆಟಿಗೆ) 131
ವಿಕೆಟ್ ಪತನ: 1-104.
ಬೌಲಿಂಗ್:
ಅಫ್ತಾಬ್ ಆಲಂ 5-1-16-0
ಹಮಿದ್ ಹಸನ್ 4-1-11-0
ರಶೀದ್ ಖಾನ್ 7-0-45-0
ಗುಲ್ಬದಿನ್ ನೈಬ್ 6-0-29-1
ಮೊಹಮ್ಮದ್ ನಬಿ 6.4-0-29-0
ಪಂದ್ಯಶ್ರೇಷ್ಠ: ಇಮ್ರಾನ್ ತಾಹಿರ್