Advertisement

ಮಾರ್ಕ್‌ರಮ್‌ಗೆ ದಕ್ಷಿಣ ಆಫ್ರಿಕಾ ಟಿ20 ನಾಯಕತ್ವ

11:19 PM Mar 09, 2023 | Team Udayavani |

ಜೊಹಾನ್ಸ್‌ಬರ್ಗ್‌: ಐಡನ್‌ ಮಾರ್ಕ್‌ರಮ್‌ ಅವರನ್ನು ದಕ್ಷಿಣ ಆಫ್ರಿಕಾ ಟಿ20 ತಂಡದ ನೂತನ ನಾಯಕನನ್ನಾಗಿ ನೇಮಿಸಲಾಗಿದೆ. ಕಳೆದ ತಿಂಗಳು ಈ ಸ್ಥಾನದಿಂದ ಕೆಳಗಿಳಿದಿದ್ದ ಟೆಂಬ ಬವುಮ ಸ್ಥಾನಕ್ಕೆ ಮಾರ್ಕ್‌ರಮ್‌ ಆಯ್ಕೆಯಾಗಿದ್ದಾರೆ.

Advertisement

ಬವುಮ ತಂಡದಿಂದಲೂ ಹೊರಬಿದ್ದಿದ್ದಾರೆ. ಆದರೆ ಏಕದಿನ ನಾಯಕತ್ವವನ್ನು ಉಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಡೀನ್‌ ಎಲ್ಗರ್‌ ಅವರಿಂದ ತೆರವಾದ ಸ್ಥಾನಕ್ಕೆ ಬವುಮ ಆಯ್ಕೆಯಾಗಿದ್ದರು.

ಐಡನ್‌ ಮಾರ್ಕ್‌ರಮ್‌ 2014ರ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದರು. ಟಿ20 ಸರಣಿ ಇದೇ ತಿಂಗಳು ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿದೆ.  ಬ್ಯೋರ್ನ್ ಫಾರ್ಟಿನ್‌, ಸಿಸಾಂಡ ಮಗಾಲ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next