Advertisement
ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಪಂದ್ಯವನ್ನು 28 ರನ್ನುಗಳಿಂದ ಗೆದ್ದಿರುವ ಭಾರತ ಬುಧವಾರವೇ ಇನ್ನೊಂದು ಸರಣಿ ಗೆಲುವಿನ ಹೊಸ್ತಿಲಲ್ಲಿ ಇದೆ. ಈ ಮೂಲಕ ಪ್ರವಾಸವನ್ನು ಭರ್ಜರಿಯಾಗಿ ಮುಗಿಸುವ ತವಕದಲ್ಲಿದೆ.
ನಾಯಕ ವಿರಾಟ್ ಕೊಹ್ಲಿ ಸರಣಿ ನಿರ್ಣಾಯಕ ಪಂದ್ಯಕ್ಕೆ ಫಿಟ್ ಆಗಲಿದ್ದಾರೆ. ರವಿವಾರದ ಪಂದ್ಯದ ವೇಳೆ ಅವರು ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನೋವು ಗಂಭೀರವಾಗಿಲ್ಲ ಮತ್ತು ಬುಧವಾರ ಟಾಸ್ ಹಾಕಲು ಮೈದಾನಕ್ಕೆ ತೆರಳುವ ನಿರೀಕ್ಷೆಯಿದೆ. ಡರ್ಬಾನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆಯೂ ಕೊಹ್ಲಿ ಮೊಣಕಾಲಿನ ನೋವಿಗೆ ಒಳಗಾಗಿದ್ದರು. ಆದರೆ ಅದು ಗಂಭೀರವಾದುದಲ್ಲ. ಆಬಳಿಕ ಅವರು ಶತಕ ಸಿಡಿಸಿದ್ದರು.
Related Articles
Advertisement
ಇಲ್ಲಿನ ಸೂಪರ್‌ನ್ಪೋರ್ಟ್ಸ್ ಪಾರ್ಕ್‌ನ ಪಿಚ್ ಪ್ರವಾಸದುದ್ದಕ್ಕೂ ನಿಧಾನಗತಿಯ ಆಟಕ್ಕೆ ಸಹಕಾರ ನೀಡಿದೆ. ಹಾಗಾಗಿ ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುವ ಸಾಧ್ಯತೆಯಿದೆ. ಚಾಹಲ್ ಜತೆ ಕುಲದೀಪ್ ಯಾದವ್ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ. ಈ ಪ್ರವಾಸದ ವೇಳೆ ಯಾವುದೇ ಪಂದ್ಯದಲ್ಲಿ ಆಡದ ಅಕ್ಷರ್ ಪಟೇಲ್ ಅವರಿಗೂ ಅವಕಾಶ ನೀಡುವ ಸಾಧ್ಯತೆಯಿದೆ.
ಡಿ’ವಿಲಿಯರ್ ಇಲ್ಲಗಾಯದ ಸಮಸ್ಯೆಯಿಂದ ಎಬಿ ಡಿ’ವಿಲಿಯರ್ ಟ್ವೆಂಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಯಾವುದೇ ಆಟಗಾರನನ್ನು ದಕ್ಷಿಣ ಆಫ್ರಿಕಾ ಹೆಸರಿಸಿಲ್ಲ. ಡ್ಯುಮಿನಿ ತಂಡವನ್ನು ಮುನ್ನಡೆಸಲಿದ್ದು ಲಭ್ಯವಿರುವ ಆಟಗಾರರಲ್ಲಿ ಸಮರ್ಥರನ್ನು ಕಣಕ್ಕೆ ಇಳಿಸಲು ಪ್ರಯತ್ನಿಸಬೇಕಾಗಿದೆ. ಉಭಯ ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಸುರೇಶ್ ರೈನಾ, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಜಯದೇವ್ ಉನಾದ್ಕತ್, ಶಾದೂìಲ್ ಠಾಕುರ್. ದಕ್ಷಿಣ ಆಫ್ರಿಕಾ: ಜೀನ್‌ಪಾಲ್ ಡ್ಯುಮಿನಿ (ನಾಯಕ), ಫರ್ಹಾನ್ ಬೆಹಡೀìನ್, ಜೂನಿಯರ್ ಡಾಲ, ರೀಜಾ ಹೆಂಡ್ರಿಕ್ಸ್, ಕ್ರಿಸ್ಟಿಯನ್ ಜಾಂಕರ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಡೇನ್ ಪ್ಯಾಟರ್ಸನ್, ಆರನ್ ಫಾಂಗಿಸೊ, ಆ್ಯಂಡಿಲ್ ಫೆಲುಕ್ವಾಯೊ, ತಾಬ್ರಾಝ್ ಶಂಸಿ, ಜಾನ್ ಜಾನ್ ಸುಟ್ಸ್. ಪಂದ್ಯ ಆರಂಭ: ಭಾರತೀಯ ಕಾಲಮಾನ ರಾತ್ರಿ 9.30