Advertisement

ಟಿ20 ಪಂದ್ಯ: ದಕ್ಷಿಣ ಆಫ್ರಿಕಾ ಚೇಸಿಂಗ್‌ ದಾಖಲೆ

10:42 PM Mar 27, 2023 | Team Udayavani |

ಸೆಂಚುರಿಯನ್‌: ಏಕದಿನ ಪಂದ್ಯದಲ್ಲಿ ಸರ್ವಾಧಿಕ ಮೊತ್ತವನ್ನು ಬೆನ್ನಟ್ಟಿ ಗೆದ್ದು ವಿಶ್ವದಾಖಲೆ ನಿರ್ಮಿಸಿರುವ ದಕ್ಷಿಣ ಆಫ್ರಿಕಾ ಇದೀಗ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲೂ ಚೇಸಿಂಗ್‌ ದಾಖಲೆ ಸ್ಥಾಪಿಸಿದೆ. ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಮುಖಾಮುಖಿಯಲ್ಲಿ ಹರಿಣಗಳ ಪಡೆ ಈ ಸಾಧನೆಗೈದಿತು.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ 5 ವಿಕೆಟಿಗೆ 258 ರನ್‌ ರಾಶಿ ಹಾಕಿತು. ಇದನ್ನು ಬೆನ್ನಟ್ಟಿಕೊಂಡು ಹೋದ ದಕ್ಷಿಣ ಆಫ್ರಿಕಾ 18.5 ಓವರ್‌ಗಳಲ್ಲಿ 4 ವಿಕೆಟಿಗೆ 259 ರನ್‌ ಬಾರಿಸಿ ಅಮೋಘ ಗೆಲುವು ಸಾಧಿಸಿತು. ನ್ಯೂಜಿಲ್ಯಾಂಡ್‌ ಎದುರಿನ 2018ರ ಆಕ್ಲೆಂಡ್‌ ಪಂದ್ಯದಲ್ಲಿ ಆಸ್ಟ್ರೇಲಿಯ 5ಕ್ಕೆ 245 ರನ್‌ ಚೇಸ್‌ ಮಾಡಿ ಗೆದ್ದದ್ದು ಈವರೆಗಿನ ದಾಖಲೆಯಾಗಿತ್ತು.

ಹಾಗೆಯೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಮೊದಲ ಬಾರಿಗೆ 500 ರನ್‌ ಹರಿದು ಬಂತು (517 ರನ್‌). 2018ರ ಭಾರತ-ವೆಸ್ಟ್‌ ಇಂಡೀಸ್‌ ನಡುವಿನ ಲಾಡರ್‌ಹಿಲ್‌ ಪಂದ್ಯದಲ್ಲಿ 489 ರನ್‌ ಒಟ್ಟುಗೂಡಿದ ದಾಖಲೆ ಪತನಗೊಂಡಿತು.

ಆರಂಭಕಾರ ಕ್ವಿಂಟನ್‌ ಡಿ ಕಾಕ್‌ ಅವರ ಸ್ಫೋಟಕ 100 ರನ್‌ (44 ಎಸೆತ, 9 ಬೌಂಡರಿ, 8 ಸಿಕ್ಸರ್‌), ಇವರು ರೀಝ ಹೆಂಡ್ರಿಕ್ಸ್‌ (68) ಜತೆಗೂಡಿ ಮೊದಲ ವಿಕೆಟಿಗೆ 10.5 ಓವರ್‌ಗಳಲ್ಲಿ ದಾಖಸಿದ 152 ರನ್‌ ಜತೆಯಾಟ ದಕ್ಷಿಣ ಆಫ್ರಿಕಾದ ಯಶಸ್ವಿ ಚೇಸಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿತು.

ವೆಸ್ಟ್‌ ಇಂಡೀಸ್‌ ಪರ ವನ್‌ಡೌನ್‌ ಬ್ಯಾಟರ್‌ ಜಾನ್ಸನ್‌ ಚಾರ್ಲ್ಸ್‌ 46 ಎಸೆತಗಳಿಂದ 118 ರನ್‌ ಸಿಡಿಸಿದರು (10 ಬೌಂಡರಿ, 11 ಸಿಕ್ಸರ್‌).

Advertisement

ಈ ಪಂದ್ಯ ಒಟ್ಟು 35 ಸಿಕ್ಸರ್‌ ಹಾಗೂ 46 ಬೌಂಡರಿಗಳಿಂದ ಕ್ರಿಕೆಟ್‌ ಪ್ರೇಮಿಗಳನ್ನು ರಂಜಿಸಿತು.

ಸಂಕ್ಷಿಪ್ತ ಸ್ಕೋರ್‌
ವೆಸ್ಟ್‌ ಇಂಡೀಸ್‌-5 ವಿಕೆಟಿಗೆ 258 (ಚಾರ್ಲ್ಸ್‌ 118, ಮೇಯರ್ 51, ಶೆಫ‌ರ್ಡ್‌ ಔಟಾಗದೆ 41, ಜಾನ್ಸೆನ್‌ 52ಕ್ಕೆ 3, ಪಾರ್ನೆಲ್‌ 43ಕ್ಕೆ 2). ದಕ್ಷಿಣ ಆಫ್ರಿಕಾ-18.5 ಓವರ್‌ಗಳಲ್ಲಿ 4 ವಿಕೆಟಿಗೆ 259 (ಡಿ ಕಾಕ್‌ 100, ಹೆಂಡ್ರಿಕ್ಸ್‌ 68, ಮಾರ್ಕ್‌ರಮ್‌ ಔಟಾಗದೆ 38, ಪೊವೆಲ್‌ 27ಕ್ಕೆ 1). ಪಂದ್ಯಶ್ರೇಷ್ಠ: ಕ್ವಿಂಟನ್‌ ಡಿ ಕಾಕ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next