Advertisement

ರೋಹಿತ್ ಗೆ ನಾಯಕತ್ವ ನೀಡುವ ಬಗ್ಗೆ ಕೊನೆಗೂ ಮೌನ ಮುರಿದ ಗಂಗೂಲಿ: ದಾದ ಹೇಳಿದ್ದೇನು?

09:54 AM Nov 05, 2019 | Team Udayavani |

ಮುಂಬೈ: ಬಿಸಿಸಿಐನ ಅಧ್ಯಕ್ಷರಾದ ನಂತರ ಕಲವೇ ದಿನಗಳಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡ ಸೌರವ್ ಗಂಗೂಲಿ ಈಗ ಮತ್ತೊಂದು ಮಹತ್ವದ ಹೇಳಿಕೆ ನೀಡಿದ್ದಾರೆ. ಟೀಂ ಇಂಡಿಯಾದಲ್ಲಿ ಬಹು ನಾಯಕತ್ವ ಪದ್ದತಿ ತರುವ ಬಗ್ಗೆ ದಾದಾ ಮೌನ ಮುರಿದಿದ್ದಾರೆ.

Advertisement

ಸದ್ಯ ವಿರಾಟ್ ಕೊಹ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮೂರೂ ಮಾದರಿಯ ನಾಯಕತ್ವ ಹೊತ್ತಿದ್ದಾರೆ. ಆದರೆ ಟಿ ಟ್ವೆಂಟಿಯಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ವಹಿಸಬೇಕು ಎಂದು ಈ ಹಿಂದೆಯೂ ಚರ್ಚೆಯಾಗಿತ್ತು. ಆದರೆ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ ‘’ ಸದ್ಯ ನಾಯಕತ್ವ ಬದಲಾವಣೆ ಅಥವಾ ಬಹುನಾಯಕತ್ವದ ಬಗ್ಗೆ ಚರ್ಚಿಸುವ ಅಗತ್ಯವೂ ಇಲ್ಲ’’ ಎನ್ನುವ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಅಂತ್ಯ ಹಾಡಿದ್ದಾರೆ.

ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ 47.16% ಜಯದ ಪ್ರತಿಶತ ಹೊಂದಿದ್ದರೆ, ರೋಹಿತ್ ಶರ್ಮಾ 58.65% ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಹೀಗಾಗಿ ರೋಹಿತ್ ಗೆ ನಾಯಕತ್ವ ಹೊರಿಸಬೇಕು ಎಂಬ ಚರ್ಚೆ ಈ ಹಿಂದೆಯೇ ಆರಂಭವಾಗಿತ್ತು.

ಸದ್ಯ ಬಾಂಗ್ಲಾದೇಶ ವಿರುದ್ಧದ ಸರಣಿಗೆ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿಯನ್ನು ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ನ ಅತೀ ಮುಖ್ಯ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next