ಮುಂಬೈ: ಟಿ20 ನಾಯಕತ್ವವನ್ನು ಸ್ವತಃ ತ್ಯಜಿಸಿದ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಕ್ಕಿಳಿಸಲಾಗಿದೆ. ಬಿಸಿಸಿಐ ನ ಏಕಾಏಕಿ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿರಾಟ್ ಪರವಾಗಿ ಹೆಚ್ಚಿನ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಏಕದಿನ ನಾಯಕತ್ವ ನೀಡಿದ ನಂತರ ಭಾರತೀಯ ಕ್ರಿಕೆಟ್ ಸುತ್ತಲಿನ ವಿಭಜನೆ-ನಾಯಕತ್ವ ಚರ್ಚೆಯ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಮೌನ ಮುರಿದಿದ್ದಾರೆ.
ಎರಡು ವೈಟ್-ಬಾಲ್ ಮಾದರಿಗಳಲ್ಲಿ ಇಬ್ಬರು ನಾಯಕರನ್ನು ಹೊಂದಿರುವುದು ಸೂಕ್ತವಲ್ಲ ಎಂದು ಭಾವಿಸಿದ್ದರಿಂದ ಕೊಹ್ಲಿ ಬದಲಿಗೆ ರೋಹಿತ್ ಅವರನ್ನು ಏಕದಿನ ನಾಯಕನನ್ನಾಗಿ ಮಾಡಲಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.
ಇದನ್ನೂ ಓದಿ:ಜಾನ್ಸಿ ರಾಣಿ, ಯಾಸ್ತಿಕಾ ಅಮೋಘ ಬ್ಯಾಟಿಂಗ್‌ಇಂಡಿಯಾ “ಎ’ ತಂಡಕ್ಕೆ ಚಾಲೆಂಜರ್ ಟ್ರೋಫಿ
ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸದಂತೆ ವಿರಾಟ್ ಕೊಹ್ಲಿಗೆ ನಾವು ಹೇಳಿದ್ದೆವು. ಆದರೆ ಅವರು ಟಿ20 ವಿಶ್ವಕಪ್ ಬಳಿಕ ನಾಯಕತ್ವ ತ್ಯಜಿಸುವುದಾಗಿ ಅವರು ಹೇಳಿದರು. ಹೀಗಾಗಿ ಸೀಮಿತ ಓವರ್ ನ ಎರಡು ತಂಡಗಳಿಗೆ ಇಬ್ಬರು ನಾಯಕರು ಇರುವುದು ಸೂಕ್ತವಲ್ಲ ಎಂದು ಬದಲಾವಣೆ ಮಾಡಲಾಗಿದೆ ಎಂದು ಗಂಗೂಲಿ ಡ್ಯಾಮೇಜ್ ಕಂಟ್ರೋಲ್ ಗೆ ಇಳಿದಿದ್ದಾರೆ.
“ನಾವು ಏಕದಿನ ತಂಡದ ನಾಯಕನಾಗಿ ಕೊಹ್ಲಿ ಅವರ ಅತ್ಯುತ್ತಮ ದಾಖಲೆಯನ್ನು ಪರಿಗಣಿಸಿದ್ದೇವೆ. ಆದರೆ ರೋಹಿತ್ ಅವರು ಭಾರತಕ್ಕೆ ನಾಯಕತ್ವ ವಹಿಸಿರುವ ಯಾವುದೇ ಏಕದಿನಗಳಲ್ಲಿ ಅವರ ದಾಖಲೆಯನ್ನು ನೋಡಿದರೆ, ಅದು ತುಂಬಾ ಒಳ್ಳೆಯದು. ಎಲ್ಲದಕ್ಕೂ ಮುಖ್ಯವಾಗಿ ಇಬ್ಬರು ವೈಟ್-ಬಾಲ್ ನಾಯಕರು ಇರಲು ಸಾಧ್ಯವಿಲ್ಲ” ಎಂದು ಭಾರತೀಯ ಎಂದು ಕ್ರಿಕೆಟ್ ಮಂಡಳಿ ಅಧ್ಯಕ್ಷ ಗಂಗೂಲಿ ಹೇಳಿದ್ದಾರೆ.