Advertisement

ಇಂಡಿಯಾ ಮಹಾರಾಜಾಸ್‌-ವರ್ಲ್ಡ್ ಜೈಂಟ್ಸ್‌: 75ರ ಸ್ವಾತಂತ್ರ್ಯ ಸಂಭ್ರಮಕ್ಕೆ ಕ್ರಿಕೆಟ್‌ ಮೆರುಗು

11:23 PM Aug 12, 2022 | Team Udayavani |

ಹೊಸದಿಲ್ಲಿ: ಭಾರತದ 75ನೇ ಸ್ವಾತಂತ್ರ್ಯ ಸಂಭ್ರಮದ ಸವಿನೆನಪಿಗಾಗಿ ಇಂಡಿಯಾ ಮಹಾರಾಜಾಸ್‌ ಮತ್ತು ವರ್ಲ್ಡ್ ಜೈಂಟ್ಸ್‌ ತಂಡಗಳ ನಡುವಿನ ವಿಶೇಷ ಕ್ರಿಕೆಟ್‌ ಪಂದ್ಯದ ದಿನಾಂಕ ಮತ್ತು ಸ್ಥಳ ನಿಗದಿಯಾಗಿದೆ.

Advertisement

ಇದು ಸೆ. 15ರಂದು ಕೋಲ್ಕತಾದ ಐತಿಹಾಸಿಕ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆಯಲಿದೆ.

ಮರುದಿನ (ಸೆ. 16) ದ್ವಿತೀಯ ಆವೃತ್ತಿಯ “ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌’ (ಎಲ್‌ಎಲ್‌ಸಿ) ಗರಿಗೆದರಲಿದೆ ಎಂದು ಕೂಟದ ಕಮಿಷನರ್‌ ರವಿ ಶಾಸ್ತ್ರಿ ತಿಳಿಸಿದರು.

ಇಂಡಿಯಾ ಮಹಾರಾಜಾಸ್‌ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ವರ್ಲ್ಡ್ ಜೈಂಟ್ಸ್‌ ತಂಡವನ್ನು ಇಂಗ್ಲೆಂಡ್‌ನ‌ ಇಯಾನ್‌ ಮಾರ್ಗನ್‌ ಮುನ್ನಡೆಸಲಿದ್ದಾರೆ.

ಫ್ರಾಂಚೈಸಿ ಮಾದರಿಯಂತೆ, 4 ತಂಡಗಳ ನಡುವೆ ಎಲ್‌ಎಲ್‌ಸಿ ಪಂದ್ಯಾವಳಿ ನಡೆಯಲಿದೆ. 22 ದಿನಗಳಲ್ಲಿ ಒಟ್ಟು 15 ಪಂದ್ಯಗಳನ್ನು ಆಡಲಾಗುವುದು.

Advertisement

ಇಂಡಿಯಾ ಮಹಾರಾಜಾಸ್‌ ತಂಡ: ಸೌರವ್‌ ಗಂಗೂಲಿ (ನಾಯಕ), ವೀರೇಂದ್ರ ಸೆಹವಾಗ್‌, ಮೊಹಮ್ಮದ್‌ ಕೈಫ್, ಯೂಸುಫ್ ಪಠಾಣ್‌, ಎಸ್‌. ಬದರೀನಾಥ್‌, ಇರ್ಫಾನ್‌ ಪಠಾಣ್‌, ಪಾರ್ಥಿವ್‌ ಪಟೇಲ್‌ (ವಿ.ಕೀ.), ಸ್ಟುವರ್ಟ್‌ ಬಿನ್ನಿ, ಎಸ್‌. ಶ್ರೀಶಾಂತ್‌, ಹರ್ಭಜನ್‌ ಸಿಂಗ್‌, ನಮನ್‌ ಓಜಾ (ವಿ.ಕೀ.), ಅಶೋಕ್‌ ದಿಂಡಾ, ಪ್ರಗ್ಯಾನ್‌ ಓಜಾ, ಅಜಯ್‌ ಜಡೇಜ, ಆರ್‌ಪಿ ಸಿಂಗ್‌, ಜೋಗಿಂದರ್‌ ಶರ್ಮ, ರೀತಿಂದರ್‌ ಸಿಂಗ್‌ ಸೋಧಿ.

ವರ್ಲ್ಡ್ ಜೈಂಟ್ಸ್‌ ತಂಡ: ಇಯಾನ್‌ ಮಾರ್ಗನ್‌ (ನಾಯಕ), ಲೆಂಡ್ಲ್ ಸಿಮನ್ಸ್‌, ಹರ್ಷಲ್‌ ಗಿಬ್ಸ್, ಜಾಕ್‌ ಕ್ಯಾಲಿಸ್‌, ಸನತ್‌ ಜಯಸೂರ್ಯ, ಮ್ಯಾಟ್‌ ಪ್ರಯರ್‌ (ವಿ.ಕೀ.), ಮುತ್ತಯ್ಯ ಮುರಳೀಧರನ್‌, ಡೇಲ್‌ ಸ್ಟೇನ್‌, ಹ್ಯಾಮಿಲ್ಟನ್‌ ಮಸಕಝ, ಮಶ್ರಫೆ ಮೊರ್ತಜ, ಅಫ್ಘಾನ್‌, ಮಿಚೆಲ್‌ ಜಾನ್ಸನ್‌, ಬ್ರೆಟ್‌ ಲೀ, ಕೆವಿನ್‌ ಓ’ಬ್ರಿಯಾನ್‌, ದಿನೇಶ್‌ ರಾಮಧಿನ್‌ (ವಿ.ಕೀ.).

Advertisement

Udayavani is now on Telegram. Click here to join our channel and stay updated with the latest news.

Next