Advertisement

ಸೌರವ್ ಗಂಗೂಲಿ ರಾಜಕೀಯ ಪ್ರವೇಶ ಖಚಿತ : ಕುತೂಹಲ ಮೂಡಿಸಿದ ಟ್ವೀಟ್

06:02 PM Jun 01, 2022 | Team Udayavani |

ಕೋಲ್ಕತಾ : ಬಹುಶಃ ಬಹಳಷ್ಟು ಜನರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುವ ಏನನ್ನಾದರೂ ಪ್ರಾರಂಭಿಸಲು ನಾನು ಯೋಜಿಸುತ್ತಿದ್ದೇನೆ” ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿ ರಾಜಕೀಯ ರಂಗ ಪ್ರವೇಶಿಸುವ ಸೂಚನೆ ನೀಡಿದ್ದಾರೆ.

Advertisement

”1992 ರಲ್ಲಿ ನನ್ನ ಕ್ರಿಕೆಟ್ ಪ್ರಯಾಣ ಆರಂಭಿಸಿದೆ. ನನಗೆ ಕ್ರಿಕೆಟ್ ಬಹಳಷ್ಟು ನೀಡಿದೆ.  ಎಲ್ಲಕ್ಕಿಂತ ಮುಖ್ಯವಾಗಿ, ಇದು ನನಗೆ ನಿಮ್ಮೆಲ್ಲರ ಬೆಂಬಲವನ್ನು ನೀಡಿದೆ. ಪ್ರಯಾಣದ ಭಾಗವಾಗಿರುವ, ನನ್ನನ್ನು ಬೆಂಬಲಿಸಿದ ಮತ್ತು ನಾನು ಇಂದು ಇರುವ ಸ್ಥಳಕ್ಕೆ ತಲುಪಲು ಸಹಾಯ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಏನನ್ನಾದರೂ ಪ್ರಾರಂಭಿಸಲು ಯೋಜಿಸುತ್ತಿದ್ದೇನೆ, ಅದು ಬಹುಶಃ ಬಹಳಷ್ಟು ಜನರಿಗೆ ಸಹಾಯ ಮಾಡುತ್ತದೆ. ನಾನು ನನ್ನ ಜೀವನದ ಈ ಅಧ್ಯಾಯವನ್ನು ಪ್ರವೇಶಿಸುವಾಗ ನಿಮ್ಮ ಬೆಂಬಲವನ್ನು ನೀವು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ, ”ಎಂದು ಬಿಸಿಸಿಐ ಅಧ್ಯಕ್ಷ ಟ್ವೀಟ್ ಮೂಲಕ ಅಭಿಪ್ರಾಯ ಹೊರ ಹಾಕಿದ್ದಾರೆ.

ಹಲವು ದಿನಗಳಿಂದ ಗಂಗೂಲಿ ಅವರು ರಾಜಕೀಯ ರಂಗ ಪ್ರವೇಶಿಸುತ್ತಾರೆ, ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ದಾದಾ ಇಂದು ಮಾಡಿರುವ ಟ್ವೀಟ್ ಆ ಚರ್ಚೆಗಳಿಗೆ ಇನ್ನಷ್ಟು ವೇಗ ನೀಡಿದೆ.

ರಾಜೀನಾಮೆ ನೀಡಿಲ್ಲ

Advertisement

ಸಾಮಾಜಿಕ ತಾಣಗಳು ಮತ್ತು ಕೆಲ ಸುದ್ದಿ ಮಾಧ್ಯಮಗಳಲ್ಲಿ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next