Advertisement

ಲಂಡನ್‌ ಬೀದಿಯಲ್ಲಿ ಮಧ್ಯರಾತ್ರಿಯಲ್ಲಿ ಕುಣಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ

04:23 PM Jul 10, 2022 | Team Udayavani |

ಲಂಡನ್‌: ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಗುರುವಾರ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಸಾಥ್‌ ನೀಡಿದರು. ಇಲ್ಲೊಂದು ವಿಶೇಷವಿದೆ ಗೊತ್ತಾ?

Advertisement

ಗಂಗೂಲಿ ಆರಂಭದಿಂದಲೂ ಎಲ್ಲಿಯೂ ಡಾನ್ಸ್‌ ಮಾಡಿ ಸುದ್ದಿಯಾಗಿರಲಿಲ್ಲ. ಈ ಬಾರಿ ಲಂಡನ್‌ ನ ಬೀದಿಯೊಂದರಲ್ಲಿ ಮಧ್ಯರಾತ್ರಿ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದಲ್ಲದೇ, ತಮ್ಮ ಪತ್ನಿ ಡೋನಾ, ಮಗಳು ಸನಾ, ಹಾಗೆಯೇ ಇತರೆ ಗೆಳೆಯರೊಂದಿಗೆ ಕುಣಿದರು.

ಇದನ್ನೂ ಓದಿ:ಬರ್ಮಿಂಗ್‌ಹ್ಯಾಮ್‌: ಭಾರತೀಯ ಪ್ರೇಕ್ಷಕರನ್ನು ನಿಂದಿಸಿದ ವ್ಯಕ್ತಿ ಬಂಧನ, ವಿಚಾರಣೆ

ಒಂದು ವೇಳೆ ಕೋಲ್ಕತದಲ್ಲೇ ಇದ್ದರೆ ಗಂಗೂಲಿಗೆ ಮನೆಯಿಂದ ಹೊರಗೆ ಬರಲೂ ಆಗದ ಪ್ರಮಾಣದಲ್ಲಿ ಅಭಿಮಾನಿಗಳು ಮುತ್ತಿಕೊಂಡಿರುತ್ತಿದ್ದರು. ಇಲ್ಲಂತೂ ಅವರು ಇದರಿಂದ ಬಿಡುಗಡೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next