Advertisement

ಗಂಗೂಲಿ ಜೀವನಾಧಾರಿತ ಚಲನ ಚಿತ್ರಕ್ಕೆ ರಜನಿಕಾಂತ್ ಪುತ್ರಿಯ ನಿರ್ದೇಶನ ?

11:34 AM May 25, 2022 | Team Udayavani |

ಕೋಲ್ಕತಾ : ಭಾರತ ಕ್ರಿಕೆಟ್ ತಂಡದ ದಿಗ್ಗಜ, ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಜೀವನಾಧಾರಿತ ಚಲನ ಚಿತ್ರ ತೆರೆಗೆ ಬರುವ ಕುರಿತು ಬಹಳ ಹಿಂದೆಯೇ ಸುದ್ದಿಯಾಗಿತ್ತು .ಈಗ ಆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

Advertisement

ಗಂಗೂಲಿ ಅವರ ಚಿತ್ರದ ವಿಶೇಷವೆಂದರೆ ಚಿತ್ರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಐಶ್ವರ್ಯಾ ರಜನಿಕಾಂತ್ ಅವರು 2010 ರಲ್ಲಿ ಧನುಷ್ ಮುಖ್ಯ ಪಾತ್ರದಲ್ಲಿ ನಟಿಸಿದ ‘3’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಸಿನಿಮಾದ ‘ವೈ ದಿಸ್ ಕೊಲವೆರಿ’ ಎಂಬ ಜನಪ್ರಿಯ ಹಾಡು ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಅವರು ‘ವೈ ರಾಜಾ ವೈ’ ಬ ಮತ್ತು ‘ಸಿನಿಮಾ ವೀರನ್’ ಸಾಕ್ಷ್ಯಚಿತ್ರವನ್ನು ಸಹ ನಿರ್ದೇಶಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ, ನಿರ್ದೇಶಕ ಲವ್ ರಂಜನ್ ಒಡೆತನದ ಲವ್ ಫಿಲ್ಮ್ಸ್‌ನಿಂದ ಅವರ ಜೀವನ ಚರಿತ್ರೆಯನ್ನು ನಿರ್ಮಿಸಲಾಗುವುದು ಎಂದು ಗಂಗೂಲಿ ಅವರೇ ದೃಢಪಡಿಸಿದ್ದರು.

ಕ್ರಿಕೆಟ್ ನನ್ನ ಜೀವನವಾಗಿದೆ, ಅದು ನನ್ನ ತಲೆಯನ್ನು ಮೇಲಕ್ಕೆತ್ತಿ ಮುನ್ನಡೆಯಲು ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನು ನೀಡಿತು, ಪಾಲಿಸಬೇಕಾದ ಪ್ರಯಾಣ. ಲವ್ ಫಿಲ್ಮ್ಸ್ ಸಂಸ್ಥೆ ನನ್ನ ಪಯಣದ ಬಯೋಪಿಕ್ ಅನ್ನು ನಿರ್ಮಿಸಿ ದೊಡ್ಡ ಪರದೆಯ ಮೇಲೆ ಅದನ್ನು ಜೀವಂತಗೊಳಿತ್ತದೆ ಎಂದು ರೋಮಾಂಚನವಾಯಿತು ಎಂದು ಗಂಗೂಲಿ ಟ್ವೀಟ್ ಮಾಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next