Advertisement

ಅಭಿವೃದ್ಧಿಗೆ ಧ್ವನಿಯಾಗುವೆ: ಮಿಥುನ್‌

02:07 AM Mar 26, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ನನ್ನ ಮನೆ. ಜಿಲ್ಲೆಯ ಜನರು ನನ್ನ ಮನೆಯ ಸದಸ್ಯರು. ಆದ್ದರಿಂದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಧ್ವನಿಯಾಗಲು ನಾನು ಚುನಾವಣ ಕಣಕ್ಕೆ ಧುಮುಕಿದ್ದೇನೆ ಎಂದು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಿಥುನ್‌ ರೈ ಹೇಳಿದರು.

Advertisement

ಅವರು ಸೋಮವಾರ ನಾಮಪತ್ರ ಸಲ್ಲಿಕೆಗೆ ಮೊದಲು ಪುರಭವನದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಪೂಜಾರಿ ಆಶೀರ್ವಾದ
ಕಾಂಗ್ರೆಸ್‌ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಮಾತನಾಡಿ, ನಿನ್ನೆ ರಾತ್ರಿ ಮಲಗಿದ್ದಾಗ ಕುದ್ರೋಳಿ ಗೋಕರ್ಣನಾಥೇಶ್ವರನೇ ಬಂದು ಎದೆಗೆ
ತಟ್ಟಿ ಹೇಳಿದ್ದಾನೆ. ಮಿಥುನ್‌ನ‌ಂಥ ಯುವ ಅಭ್ಯರ್ಥಿಯನ್ನು ನೀಡಿದ್ದು ಅದೇ ಶಿವ. ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಮರು, ಕ್ರೈಸ್ತರು ಆರಾಧಿಸುವ ಕುದ್ರೋಳಿ ಶಿವ ಮಿಥುನ್‌ ರೈ ಅವರನ್ನು ಗೆಲ್ಲಿಸಿಯೇ ಗೆಲ್ಲಿಸುತ್ತಾನೆ. ಒಂದುವೇಳೆ ಮಿಥುನ್‌ ಚುನಾವಣೆ ಗೆಲ್ಲದಿದ್ದರೆ ಕುದ್ರೋಳಿ ಕ್ಷೇತ್ರಕ್ಕೆ ಹೋಗುವುದನ್ನೇ ನಿಲ್ಲಿಸುತ್ತೇನೆ. ಉಳ್ಳಾಲ ದರ್ಗಾಕ್ಕೂ ಚರ್ಚ್‌ಗಳಿಗೂ ಹೋಗುತ್ತಿದ್ದೆ. ಮಿಥುನ್‌ ಗೆಲ್ಲದಿದ್ದರೆ ಅಲ್ಲಿಗೂ ಹೋಗುವುದಿಲ್ಲ’ ಎಂದರು.

ಸಚಿವ ಯು.ಟಿ. ಖಾದರ್‌, ಮಾಜಿ ಸಚಿವ ರಮಾನಾಥ ರೈ, ಜೆಡಿಎಸ್‌ ಮುಖಂಡ ಅಮರನಾಥ ಶೆಟ್ಟಿ ಮತ್ತು ಜೆಡಿಎಸ್‌ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಂಞಿ, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್‌ – ಜೆಡಿಎಸ್‌ ಪಕ್ಷದ ಹಿರಿಯ ನಾಯಕರಾದ ಅಭಯಚಂದ್ರ ಜೈನ್‌, ಮೊದಿನ್‌ ಬಾವಾ, ಜೆ.ಆರ್‌. ಲೋಬೊ, ವಿಜಯ ಕುಮಾರ್‌ ಶೆಟ್ಟಿ, ಧನಂಜಯ ಅಡ³ಂಗಾಯ, ಕೆ.ಎಸ್‌.ಎಂ. ಮಸೂದ್‌, ಎಂ.ಬಿ. ಸದಾಶಿವ, ಸುರೇಶ್‌ ಬಲ್ಲಾಳ್‌, ಕವಿತಾ ಸನಿಲ್‌, ಬಿ. ಇಬ್ರಾಹಿಂ, ನವೀನ್‌ ಡಿ’ಸೋಜಾ, ಮುಹಮ್ಮದ್‌ ಹನೀಫ್‌, ಪ್ರತಿಭಾ ಕುಳಾç, ಅಕ್ಷಿತ್‌ ಸುವರ್ಣ, ಬಿ.ಎಚ್‌. ಖಾದರ್‌, ಕಣಚೂರು ಮೋನು, ವಸಂತ ಪೂಜಾರಿ ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next