Advertisement

ಸೊರಬದಲ್ಲಿ ಮತ್ತೆ ಐವರಿಗೆ ಸೋಂಕು

01:08 PM Jul 09, 2020 | Naveen |

ಸೊರಬ: ತಾಲೂಕಿನಲ್ಲಿ ಮಂಗಳವಾರ ತಡರಾತ್ರಿ ಮತ್ತೆ ಐದು ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 17ಕ್ಕೆ ಏರಿದ್ದು, ಆ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

ಸೋಮವಾರ ಕೋವಿಡ್ ಸೋಂಕಿತರು ಇಲ್ಲ ಎಂದು ನಿರಾಳರಾಗುವಷ್ಟರಲ್ಲಿಯೇ ಮಂಗಳವಾರ ರಾತ್ರಿ ಮೂವರಿಗೆ ಈ ಹಿಂದೆ ಕಾಣಿಸಿಕೊಂಡಿದ್ದ ಮೆಸ್ಕಾಂ ಸಿಬ್ಬಂದಿಗಳ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ, ಬೆಂಗಳೂರಿನಿಂದ ಬಂದ ವ್ಯಕ್ತಿಗೆ ಹಾಗೂ ಯಾವುದೇ ಸಂಪರ್ಕ ಇಲ್ಲದ ಒಬ್ಬ ವೃದ್ಧೆಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಯಾವುದೇ ಪ್ರಯಾಣದ ಇತಿಹಾಸವಿಲ್ಲದ ಆನವಟ್ಟಿ ಹೋಬಳಿ ವ್ಯಾಪ್ತಿಯ ಸಿರಿನಾಯಕಕೊಪ್ಪದ 70 ವರ್ಷದ ವೃದ್ಧೆಗೆ ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರಿನಿಂದ ಬೊಮ್ಮನಹಳ್ಳಿ ಗ್ರಾಮಕ್ಕೆ ಬಂದ 42 ವರ್ಷದ ವ್ಯಕ್ತಿಗೆ, ಮಾವಲಿಯ ಮೆಸ್ಕಾಂ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕದಿಂದ 24 ವರ್ಷದ ಮಹಿಳೆಗೆ, ಮತ್ತೋರ್ವ ದೂಗೂರು ಗ್ರಾಮದ ಮೆಸ್ಕಾಂ ಸಿಬ್ಬಂದಿಯ ಸಂಪರ್ಕದಿಂದ ಆತನ ಅಜ್ಜಿ 80 ವರ್ಷದ ವೃದ್ಧೆಗೆ ಹಾಗೂ ಪಟ್ಟಣದ ಕೆಇಬಿ ಕಾಲೋನಿಯ ಒಬ್ಬ ಮೆಸ್ಕಾಂ ಲೈನ್‌ಮ್ಯಾನ್‌ಗೆ ಕೋವಿಡ್ ಸೋಂಕು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next