Advertisement

ಭಾರತೀ ವಿಷ್ಣುವರ್ಧನ್‌ಗೆ ಸೂರಜ್‌ ಕಲಾಸಿರಿ ಪ್ರಶಸ್ತಿ

11:37 AM Dec 04, 2018 | |

ಉಳ್ಳಾಲ: ಶಿಕ್ಷಣ ಸಂಸ್ಥೆಗಳು ವ್ಯಾವಹಾರಿಕ ಶಿಕ್ಷಣಕ್ಕೆ ಸೀಮಿತವಾಗದೆ ಜ್ಞಾನವನ್ನು ಪಸರಿಸುವ ಕಾರ್ಯ ನಡೆಸಬೇಕು. ಈ ನಿಟ್ಟಿನಲ್ಲಿ ಸೂರಜ್‌ ಶಿಕ್ಷಣ ಸಂಸ್ಥೆಯು ಸೂರಜ್‌ ಕಲಾಸಿರಿಯ ಮೂಲಕ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ನೀಡುವ ಕಾರ್ಯ ಶ್ಲಾಘನೀಯ ಎಂದು ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಹೇಳಿದರು.

Advertisement

ಕುರ್ನಾಡು ಮುಡಿಪುವಿನ ಸೂರಜ್‌ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸೂರಜ್‌ ಪದವಿಪೂರ್ವ ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆದ ಸೂರಜ್‌ ಕಲಾಸಿರಿ-2018ರ ಸರ್ವಾಧ್ಯಕ್ಷತೆ ವಹಿಸಿ ನಟಿ ಭಾರತೀ ವಿಷ್ಣುವರ್ಧನ್‌ ಅವರಿಗೆ ಸೂರಜ್‌ ಕಲಾಸಿರಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸೂರಜ್‌ ಕಲಾಸಿರಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಸೂರಜ್‌ ಕಲಾಸಿರಿ ಪ್ರಶಸ್ತಿ ಸ್ವೀಕರಿಸಿದ ಭಾರತೀ ವಿಷ್ಣುವರ್ಧನ್‌  ಮಾತನಾಡಿ, ಮಂಗಳೂರು ನಮ್ಮ ಕುಟುಂಬಕ್ಕೆ ಅತ್ಯಂತ ಹೆಚ್ಚು ಪ್ರೀತಿ ನೀಡಿದ ಊರು. ಸೂರಜ್‌ ಕಲಾಸಿರಿಯ ಮೂಲಕ ಮಂಜುನಾಥ್‌ ರೇವಣರ್‌ ಅತ್ಯಂತ ಸಾಧನೆಯ ಕೆಲಸ ಮಾಡಿದ್ದಾರೆ. ಈ ಗೌರವ ಈ ಕಾರ್ಯಕ್ರಮಕ್ಕೆ ದುಡಿದ ಎಲ್ಲರಿಗೂ ಸಲ್ಲಬೇಕಾಗಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಮಾತನಾಡಿ, ಶ್ರೇಷ್ಠ ಸಾಧಕರನ್ನು ಸಮ್ಮಾನಿಸುವುದರಿಂದ ಅವರ ವರ್ಚಸ್ಸಲ್ಲ ಈ ಪ್ರದೇಶದ ವರ್ಚಸ್ಸು ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಸೂರಜ್‌ ಶಿಕ್ಷಣ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಸಾಂಬಾರ್‌ ತೋಟ ಜುಮಾ ಮಸೀದಿಯ ಧರ್ಮಗುರು ಪಿ.ಕೆ. ಮಹಮ್ಮದ್‌ ಮದನಿ, ಜಿ.ಪಂ. ಸದಸ್ಯೆ ಮಮತಾ ಡಿ.ಎಸ್‌. ಗಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕಿ ಹೇಮಲತಾ ರೇವಣRರ್‌, ನಿರ್ದೇಶಕ ಸೂರಜ್‌ ರೇವಣರ್‌ ಉಪಸ್ಥಿತರಿದ್ದರು. ಸೂರಜ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್‌. ರೇವಣRರ್‌ ಸ್ವಾಗತಿಸಿದರು. ನಿತೀಶ್‌ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು. ಸುಧಾಕರ ರಾವ್‌ ಪೇಜಾವರ, ಕರೀಷ್ಮಾ, ಸಮ್ಮಾನಿತರ ವಿವರ ನೀಡಿದರು. ಸೂರಜ್‌ ಪ.ಪೂ. ಕಾಲೇಜಿನ ಪ್ರಾಂಶುಪಾಲೆ ವಿಮಲಾ ಶೆಟ್ಟಿ ವಂದಿಸಿದರು.

ಐವರಿಗೆ ಸೂರಜ್‌ ಕಲಾಸಿರಿ ಸೇವಾ ಪ್ರಶಸ್ತಿ
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉದಯವಾಣಿಯ ನಿವೃತ್ತ ಸಂಪಾದಕೀಯ ಸಲಹೆಗಾರ ಎನ್‌. ಗುರುರಾಜ್‌, ಮಾಧ್ಯಮ ಕ್ಷೇತ್ರದಲ್ಲಿ ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕ ವಸಂತ್‌ ಕುಮಾರ್‌ ಪೆರ್ಲ, ಕಲಾಕ್ಷೇತ್ರದಲ್ಲಿ ಕಲಾವಿದ ಮೋಹನ್‌ ವರ್ಣೇಕರ್‌, ಉದ್ಯಮ ಕ್ಷೇತ್ರದಲ್ಲಿ ಉದ್ಯಮಿ ಮುಕುಂದ್‌ ಕಾಮತ್‌, ಕ್ರೀಡಾಕ್ಷೇತ್ರದಲ್ಲಿ ಒಲಿಪಿಂಕ್‌ ಸಾಧಕಿ ಸಹನಾ ಕುಮಾರಿ ಅವರಿಗೆ ಸೂರಜ್‌ ಕಲಾಸಿರಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next