Advertisement

PoK: ಭಾರತದೊಂದಿಗೆ ಪಿಒಕೆ ಶೀಘ್ರ ವಿಲೀನ

09:16 PM Sep 12, 2023 | Team Udayavani |

ನವದೆಹಲಿ: ಕೆಲವೇ ಸಮಯದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು(ಪಿಒಕೆ) ಸ್ವಯಂಪ್ರೇರಿತವಾಗಿ ಭಾರತದೊಂದಿಗೆ ವಿಲೀನವಾಗಲಿದೆ ಎಂದು ಕೇಂದ್ರ ಸಚಿವ, ನಿವೃತ್ತ ಸೇನಾ ಮುಖ್ಯಸ್ಥ ಜ.ವಿ.ಕೆ.ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ಪಿಒಕೆಯನ್ನು ಭಾರತದೊಳಕ್ಕೆ ವಿಲೀನಗೊಳಿಸಬೇಕೆಂಬ ಅಲ್ಲಿನ ನಿವಾಸಿಗಳ ಬೇಡಿಕೆ ಕುರಿತು ಬಿಜೆಪಿ ನಿಲುವು ಏನು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ವಿ.ಕೆ.ಸಿಂಗ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಇದೇ ವೇಳೆ, ಚೀನಾ ಬಿಡುಗಡೆಗೊಳಿಸಿರುವ ತನ್ನ ನೂತನ ನಕ್ಷೆಯಲ್ಲಿ ಕಾಶ್ಮೀರದ ಅಕ್ಸಾಯ್‌ ಚಿನ್‌ ಮತ್ತು ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಒಳಗೊಂಡಿರುವುದಕ್ಕೆ ವಿ.ಕೆ.ಸಿಂಗ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜ.ಸಿಂಗ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾಥೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಈಗಾಗಲೇ ಭಾರತದ ಅವಿಭಾಜ್ಯ ಅಂಗವಾಗಿದೆ. ಅದರ ವಿಲೀನದ ಕುರಿತು ಮಾತನಾಡುವುದು ದೇಶದ್ರೋಹದ ಹೇಳಿಕೆಯಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next