Advertisement

ಶೀಘ್ರ ಬಿಎಫ್ ಸಿ ಮಹಿಳಾ ತಂಡ

06:10 AM Mar 08, 2018 | |

ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ದಿನದಂದೇ ರಾಜ್ಯ ಫ‌ುಟ್‌ಬಾಲ್‌ ಆಟಗಾರ್ತಿಯರಿಗೆ ಸಿಹಿ ಸುದ್ದಿಯೊಂದು ಪ್ರಕಟವಾಗಿದೆ.

Advertisement

ಐ ಲೀಗ್‌, ಐಎಸ್‌ಎಲ್‌ (ಇಂಡಿಯನ್‌ ಸೂಪರ್‌ ಲೀಗ್‌)ನಲ್ಲಿ ಪ್ರಚಂಡ ಪರಾಕ್ರಮ ಮೆರೆದ ಸುನಿಲ್‌ ಚೆಟ್ರಿ ನೇತೃತ್ವದ ಬೆಂಗಳೂರು ಎಫ್ಸಿ ವಿಶ್ವದಾದ್ಯಂತ ಸುದ್ದಿಯಲ್ಲಿದೆ. ಚೆಟ್ರಿ ಹುಡುಗರ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿ ಬಂದಿದೆ. ಈ ಬೆನ್ನಲ್ಲೇ ಜಿಂದಾಲ್‌ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು ಶೀಘ್ರದಲ್ಲೇ ಬೆಂಗಳೂರು ಎಫ್ ಸಿ  ಮಹಿಳಾ ಕ್ಲಬ್‌ ತಂಡವನ್ನು ರಚಿಸುವ ನಿರ್ಧಾರ ತೆಗೆದುಕೊಂಡಿದೆ. ಈ ವಿಷಯವನ್ನು ಸ್ವತಃ ಬೆಂಗಳೂರು ಎಫ್ ಸಿ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ.

ಬೆಂಗಳೂರು ಎಫ್ ಸಿ  ಹೇಳಿದ್ದೇನು?: ಈ ಕುರಿತಂತೆ ಉದಯವಾಣಿಗೆ ಬೆಂಗಳೂರು ಎಫ್ ಸಿ  ತಂಡದ ಮೂಲಗಳು ಪ್ರತಿಕ್ರಿಯೆ ನೀಡಿದ್ದು ಹೀಗೆ. ಮಹಿಳಾ ಫ‌ುಟ್ಬಾಲ್‌ ಕ್ಲಬ್‌ ನಡೆಸುವ ಕುರಿತಂತೆ ಮಾತುಕತೆ ನಡೆದಿದೆ. ಕಳೆದ ವರ್ಷವೇ ಈ ಕುರಿತಂತೆ ಚರ್ಚೆಗಳು ನಡೆದಿದ್ದವು. ಆದರೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕಾರಣಾಂತರಗಳಿಗೆ ಸಾಧ್ಯವಾಗಿರಲಿಲ್ಲ. ವಿಶ್ವ ಮಹಿಳಾ ದಿನದಂದು ತಂಡವನ್ನು ರಚಿಸುವ ಘೋಷಣೆ ಮಾಡುತ್ತಿದ್ದೆವೆ. ಶೀಘ್ರದಲ್ಲೇ ತಂಡ ರಚನೆಯಾಗಲಿದೆ ಎಂದು ತಿಳಿಸಿದರು.

ಪ್ರತಿ ಕ್ಲಬ್‌ಗೂ ಮಹಿಳಾ ತಂಡ ಕಡ್ಡಾಯ: ದೇಶದಲ್ಲಿ ಫ‌ುಟ್ಬಾಲ್‌ ಬೆಳವಣಿಗೆಗೆ, ಆಟಗಾರರ ಏಳಿಗೆಗೆ, ಅವರ ತರಬೇತಿಗಾಗಿ ಅಖೀಲ ಭಾರತೀಯ ಫ‌ುಟ್ಬಾಲ್‌ ಸಂಸ್ಥೆ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಪುರುಷರಿಗಾಗಿ ಐ ಲೀಗ್‌ ಮತ್ತು ಐಎಸ್‌ಎಲ್‌ ಪರಿಚಯಿಸಿದೆ. ಒಂದು ಹಂತದ ಯಶಸ್ಸನ್ನೂ ಸಾಧಿಸಿದೆ. ಅಂತೆಯೆ ದೇಶದಲ್ಲಿ 2016ರಲ್ಲಿ ಮಹಿಳಾ ಫ‌ುಟ್ಬಾಲ್‌ ಲೀಗ್‌ ಕೂಟವನ್ನು ಆರಂಭಿಸಿ ಫ‌ುಟ್ಬಾಲ್‌ ಕ್ರಾಂತಿ ನಡೆಸಲಾಗಿತ್ತು. ಮೊದಲ ಆವೃತ್ತಿ ಕೂಟದಲ್ಲಿ 6 ತಂಡಗಳು ಪಾಲ್ಗೊಂಡಿದ್ದವು. ಅದು ವಿವಿಧ ರಾಜ್ಯ ಸಂಸ್ಥೆಗಳ ತಂಡಗಳಾಗಿದ್ದವು. ಇದಾದ ಬಳಿಕ ಐಎಸ್‌ಎಲ್‌ ಫ್ರಾಂಚೈಸಿಗಳಾದ ಡೆಲ್ಲಿ ಡೈನಾಮೊಸ್‌, ಚೆನ್ನೈಯನ್‌ ಎಫ್ ಸಿ , ಕೇರಳ ಬ್ಲಾಸ್ಟರ್ಸ್‌, ಪುಣೆ ಎಫ್ ಸಿ , ಅಟ್ಲೆಟಿಕೊ ಕೊಲ್ಕತಾ ಬಳಿ ಚರ್ಚೆ ನಡೆಸಿತು. ಮಹಿಳಾ ಕ್ಲಬ್‌ ತಂಡವನ್ನು ಕಡ್ಡಾಯವಾಗಿ ಪ್ರತಿ ತಂಡಗಳು ಹೊಂದುವ ಕುರಿತಂತೆ ಚರ್ಚೆ ನಡೆಯಿತು. ಇದರಂತೆ ಪುಣೆ ಸಿಟಿ, ಐಜ್ವಾಲ್‌ ಎಫ್ ಸಿ , ಪುದುಚೇರಿ, ಒಡಿಶಾ, ಮಣಿಪುರದಿಂದ ಮಹಿಳಾ ತಂಡಗಳನ್ನು ರಚಿಸಿವೆ. ಉಳಿದ ಕ್ಲಬ್‌ಗಳು  ಕೂಡ ಮಹಿಳಾ ತಂಡವನ್ನು ಹೊಂದುವ ಕನಸು ಕಾಣುತ್ತಿವೆ.

ಬೆಂಗಳೂರು ಎಫ್ ಸಿ  ಮಹಿಳಾ ಕ್ಲಬ್‌ ತಂಡವನ್ನು ರಚಿಸುತ್ತಿರುವುದು ಸ್ವಾಗತಾರ್ಹ ವಿಷಯ. ಇದರಿಂದ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಸಿಗಲಿದೆ ಎನ್ನುವುದು ಸಂತಸದ ಸಂಗತಿ.
– ಚಿತ್ರಾ, ಫ‌ುಟ್ಬಾಲ್‌ ಕೋಚ್‌

Advertisement

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next