Advertisement
ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯ ಸರಕಾರದ ಇ-ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಇ-ಕನ್ನಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಉದ್ದೇಶಿತ ತಂತ್ರಾಂಶವು ಇಂದಿನ ಖಾಸಗಿ ತಂತ್ರಾಂಶಗಳಿಗಿಂತ ಅತಿ ಹೆಚ್ಚು ದಕ್ಷತೆಯನ್ನು ಹೊಂದಿದ್ದು, ಸುಮಾರು 2.3 ಕೋಟಿ ಆಂಗ್ಲ ಮತ್ತು ಕನ್ನಡ ಸಮಾನಾಂತರ ವಾಕ್ಯಗಳನ್ನು ಆಧರಿಸಿ ಸಿದ್ಧಗೊಂಡಿದೆ.
Related Articles
ಜಗತ್ತಿನ ಬೇರೆ ಭಾಗಗಳಿಂದ ಉದ್ಯೋಗ, ವ್ಯವಹಾರದ ಉದ್ದೇಶದಿಂದ ಇಲ್ಲಿ ನೆಲೆಸಿರುವ ಅನ್ಯಭಾಷಿಕರಿಗೆ, ಕನ್ನಡ ಕಲಿಯಲು ಉತ್ಸಾಹ ಇರುವವರಿಗೆ ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ಉದ್ದೇಶದಿಂದ ಸರಕಾರವು ಇ-ಕಲಿಕಾ ಕನ್ನಡ ಪೊರ್ಟಲ್ ರೂಪಿಸಿದ್ದು, ಇದು ಪ್ರಾಧಿಕಾರದ ಆಶಯಕ್ಕೆ ಪೂರಕವಾಗಿದೆ. ಕನ್ನಡೇತರರು ಕನ್ನಡ ಭಾಷೆಯನ್ನು ಕಲಿಯುವಲ್ಲಿ ಇ-ಕಲಿಕಾ ಕನ್ನಡ ಪೋಟರ್ಲ್ ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಡಾ| ಬಿಳಿಮಲೆ ತಿಳಿಸಿದರು.
Advertisement
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಸಂತೋಷ ಹಾನಗಲ್ಲ, ಇ-ಕನ್ನಡ ಯೋಜನೆಯ ಯೋಜನ ನಿರ್ದೇಶಕಿ ನಂದಿನಿ ಪಿ.ಎಂ. ಹಾಗೂ ಅಧಿಕಾರಿ, ಸಿಬಂದಿ ಹಾಜರಿದ್ದರು.