Advertisement

ಶೀಘ್ರದಲ್ಲೇ ಡೆಕ್ಕನ್‌ನಲ್ಲಿ “ಉಡಾನ್‌’

03:45 AM Mar 27, 2017 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್‌ ಯೋಜನೆಯಡಿ ದೇಶದ ಜನಸಾಮಾನ್ಯನಿಗೆ ಅಗ್ಗದ ದರದಲ್ಲಿ ಪ್ರಾದೇಶಿಕ ವಿಮಾನಯಾನ ಸೇವೆಯನ್ನು ಪಡೆಯುವ ಅವಕಾಶ ಸದ್ಯದಲ್ಲೇ ಒದಗಿಬರಲಿದೆ.

Advertisement

ಖಾಸಗಿ ವಿಮಾನಯಾನ ಸಂಸ್ಥೆಗಳಾದ ಕರ್ನಾಟಕದ ಡೆಕ್ಕನ್‌ ಚಾರ್ಟರ್‌ ಮತ್ತು ಏರ್‌ ಒಡಿಶಾವು ಸುಮಾರು 50 ಪ್ರಾದೇಶಿಕ ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಿಸಲು ನಿರ್ಧರಿಸಿವೆ.

ಮಾರ್ಗಗಳು ಮತ್ತು ಆಪರೇಟರ್‌ಗಳ ಆಯ್ಕೆ ಪ್ರಕ್ರಿಯೆಯು ಅಂತ್ಯಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಸರ್ಕಾರವು ಈ ಕುರಿತ ಘೋಷಣೆ ಮಾಡಲಿದೆ. ಡೆಕ್ಕನ್‌ ಮತ್ತು ಏರ್‌ಒಡಿಶಾ ಹೊರತುಪಡಿಸಿ ಏರ್‌ಇಂಡಿಯಾದ ಅಂಗವಾದ ಅಲಯನ್ಸ್‌ ಏರ್‌, ಟ್ರೂ ಜೆಟ್‌ ಕಂಪನಿಯ ಟಬೋì ಮೇಘಾ ಏರ್‌ವೆàಸ್‌ ಮತ್ತು ಸ್ಪೈಸ್‌ಜೆಟ್‌ ಕೂಡ ಉಡಾನ್‌ ವಿಮಾನಯಾನದ ಬಿಡ್‌ ಪಡೆಯುವಲ್ಲಿ ಯಶಸ್ವಿಯಾಗಿವೆ.

21 ಮಾರ್ಗಗಳಲ್ಲಿ ಡೆಕ್ಕನ್‌ ಚಾರ್ಟರ್‌: ಏರ್‌ ಒಡಿಶಾವು 25 ಮಾರ್ಗಗಳಲ್ಲಿ, ಜಿ.ಆರ್‌. ಗೋಪಿನಾಥ್‌ ಅವರ ಡೆಕ್ಕನ್‌ ಚಾರ್ಟರ್‌ 21 ಮಾರ್ಗಗಳಲ್ಲಿ ಸಂಚರಿಸಲಿವೆ. ಇನ್ನು ಅಲಯನ್ಸ್‌ ಏರ್‌ ಮತ್ತು ಸ್ಪೈಸ್‌ಜೆಟ್‌ ಕನಿಷ್ಠ 5 ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಮೊದಲ ಪ್ರಾದೇಶಿಕ ಸಂಪರ್ಕ ಯೋಜನೆಯ ವಿಮಾನವು ಅಲಯನ್ಸ್‌ ಏರ್‌ನದ್ದಾಗಿದ್ದು, ಇದು ಶೀಘ್ರದಲ್ಲೇ ಭಟಿಂಡಾದಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚರಿಸಲಿದೆ. ಪೂರ್ಣಪ್ರಮಾಣದ ಕಾರ್ಯಾಚರಣೆಯು ಮೇ ತಿಂಗಳಲ್ಲಿ ಆರಂಭವಾಗಲಿದೆ.

70 ಮಾರ್ಗಗಳಲ್ಲಿ ಸಂಚಾರ 
ಒಟ್ಟಾರೆ 43 ವಿಮಾನನಿಲ್ದಾಣಗಳಲ್ಲಿ 5 ಆಪರೇಟರ್‌ಗಳಿಗೆ 70 ಮಾರ್ಗಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಉಡಾನ್‌ (ಉಡೇ ದೇಶ್‌ ಕೇ ಆಮ್‌ ನಾಗರಿಕ್‌) ಯೋಜನೆಯು ಹೆಚ್ಚು ಬಳಕೆಯಾಗದ ವಿಮಾನ ನಿಲ್ದಾಣಗಳಿಗೆ ಕಡಿಮೆ ವೆಚ್ಚದಲ್ಲಿ ಸಂಪರ್ಕ ಕಲ್ಪಿಸುವಂಥ ಉದ್ದೇಶ ಹೊಂದಿದೆ. ಒಂದು ಗಂಟೆಯ ಸಂಚಾರಕ್ಕೆ ಟಿಕೆಟ್‌ ದರದ ಮಿತಿಯನ್ನು 2,500 ರೂ.ಗೆ ನಿಗದಿಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next