ಹೊಸದಿಲ್ಲಿ: ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಕೂಟದ ಪಂದ್ಯದಲ್ಲಿ ಸೋನಿಯಾ ಲಾಥರ್ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಶನಿವಾರ ನಡೆದ 57 ಕೆ.ಜಿ. ವಿಭಾಗದ ಫೇದರ್ವೆàಟ್ ವಿಭಾಗದಲ್ಲಿ ಸೋನಿಯಾ 5-0 ಅಂಕಗಳಿಂದ ಮೊರಕ್ಕೋದ ತೌಜಾನಿ ದೊವಾ ಸೋನಿಯಾ ಅವರನ್ನು ಸೋಲಿಸಿದರು. ಆದರೆ ಈ ಸ್ಪರ್ಧೆ ವಿವಾದದಲ್ಲಿ ಮುಕ್ತಾಯಗೊಂಡಿತು.
ಸೋನಿಯಾ ಪರ ತೀರ್ಪು
ತೌಜಾನಿ ದೊವಾ ಅವರು ಅಸಂವಿಧಾನಿಕ ಆಟ ಪ್ರದರ್ಶಿಸಿದರು. ಹೀಗಾಗಿ ಸೋನಿಯಾ ಹಾಗೂ ಮೊರಕ್ಕೊ ಆಟಗಾರ್ತಿ ನಡುವಿನ ಪಂದ್ಯದ ಫಲಿತಾಂಶವನ್ನು 5 ಮಂದಿ ಜಡ್ಜ್ಗಳ ತಂಡ ನಿಧ‚ìರಿಸಿತು. ಅಂತಿಮವಾಗಿ ಮೊರಕ್ಕೊ ಆಟಗಾರ್ತಿಯ ಬಲಗೈ ಪಂಚ್ ಅಸಂವಿಧಾನಿಕ ಎನ್ನುವುದನ್ನು ತೀರ್ಪುಗಾರರು ಘೋಷಿಸಿದರು. ಇದರಿಂದ ಸೋನಿಯಾ ಲಾಥರ್ಗೆ 5 ಅಂಕ ಸಿಕ್ಕಿತು.
ಈ ಕೂಟದಲ್ಲಿ ಸೋನಿಯಾ ಚಿನ್ನ ಗೆಲ್ಲುವ ಫೇವರಿಟ್ ಆಗಿದ್ದಾರೆ. 2016ರ ವಿಶ್ವ ಮಹಿಳಾ ಬಾಕ್ಸಿಂಗ್ ಕೂಟದಲ್ಲಿ ಸೋನಿಯಾ ಬೆಳ್ಳಿ ಪದಕ ಗೆದ್ದಿದ್ದರು.