Advertisement

ಬಿರಿಯಾನಿ + ಚಿತ್ರಾನ್ನ = ಉಮಬಾ, ಮತ್ತೆ ಬಂದವರ ಹಾಡುಗಳು

06:00 AM Nov 17, 2017 | Harsha Rao |

ವೇದಿಕೆ ತುಂಬಾ ಜನ. ಹಾಗಾಗಿ ಈ ಸಮಾರಂಭ ಮುಗಿಯುವುದಕ್ಕೆ ಎಷ್ಟು ಹೊತ್ತಾಗಬಹುದೋ? ಯಾರು ಎಷ್ಟೆಲ್ಲಾ ಮಾತಾಡಬಹುದೋ? ಎಂಬ ಭಯ ಎಲ್ಲರನ್ನೂ ಕಾಡುತಿತ್ತು. ಆದರೆ, ಚಿತ್ರದ ಮೇಕಿಂಗ್‌ ವೀಡಿಯೋ ತೋರಿಸಿದಷ್ಟು ಹೊತ್ತು ಕೂಡಾ ಯಾರೂ ಮಾತಾಡಲಿಲ್ಲ. ಸಮಾರಂಭ ಎಷ್ಟು ತಡವಾಗಿ ಪ್ರಾರಂಭವಾಯಿತೋ, ಅಷ್ಟೇ ಬೇಗ ಮುಗಿದೂ ಹೋಗಿತ್ತು. ಅಂದಹಾಗೆ, ಅದು “ಉಪೇಂದ್ರ ಮತ್ತೆ ಬಾ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಹಾಡುಗಳು ಯಾವಾಗಲೋ ಬಿಡುಗಡೆಯಾಗಿವೆ. ಆದರೆ, ಹಾಡುಗಳ ಬಿಡುಗಡೆ ನೆಪದಲ್ಲಿ ಮಾಧ್ಯಮದವರೊಂದಿಗೆ ಒಂದಿಷ್ಟು ಚಿತ್ರದ ಬಗ್ಗೆ ಹೇಳ್ಳೋಣ ಎಂದು ಚಿತ್ರತಂಡದವರು ಬಂದಿದ್ದರು.

Advertisement

ಮೊದಲು ಮಾತನಾಡಿದ್ದು ಹರ್ಷಿಕಾ ಪೂಣಾತ್ಛ. ಅವರು ಕೊಚ್ಚಿಗೆ ಹೊರಡುವ ಆತರದಲ್ಲಿದ್ದರು. ಫ್ಲೈಟು 10ಕ್ಕಿದೆ. ಸಮಯ ಆಗಲೇ ಎಂಟಾಗಿದೆ. ಹಾಗಾಗಿ ಅವರು ಮೊದಲು ಮಾತಾಡಿದರು. ಉಪೇಂದ್ರ ಅವರಿಗೆ ಥ್ಯಾಂಕ್ಸ್‌ ಹೇಳುತ್ತಲೇ ಅವರು ಮಾತು ಶುರು ಮಾಡಿದರು. “ಉಪೇಂದ್ರ ಅವರ ಜೊತೆಗೆ ಅಭಿನಯ ಮಾಡಿದ್ದೇ ಮರೆಯದ ಅನುಭವ. ಇನ್ನು ಪ್ರೇಮ ನಮ್ಮ ಕೊಡಗಿನವರು. ಅವರು ಚಿತ್ರರಂಗದಲ್ಲಿ ಬೆಳೆದಷ್ಟು ಬೆಳೆಯುವಾಸೆ. ಚಿತ್ರದಲ್ಲಿ ಒಳ್ಳೆಯ ಹಾಡುಗಳಿವೆ. ನಾನು ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ಚಿತ್ರದಲ್ಲಿ ನನ್ನದು ಉಪೇಂದ್ರ ಅವರ ಅತ್ತೆ ಮಗಳ ಪಾತ್ರ. ಇದು ನನ್ನ ಚಿತ್ರಜೀವನದಲ್ಲೇ ಬೆಸ್ಟ್‌ ಪಾತ್ರ’ ಎಂದು ಓಡಿದರು.

ಪ್ರೇಮ ಅವರು ಇದೇ ಮೂರನೆಯ ಬಾರಿಗೆ ಉಪೇಂದ್ರರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. “ಬಹಳ ಒಳ್ಳೆಯ ಪಾತ್ರ ಸಿಕ್ಕಿತ್ತು. ಉಪೇಂದ್ರ ಅವರ ಜೊತೆಗೆ ಇದು ನನ್ನ ಮೂರನೆಯ ಚಿತ್ರ. ಚಿತ್ರ ಚೆನ್ನಾಗಿ ಬಂದಿದೆ ಎಂಬ ನಂಬಿಕೆ ಇದೆ. ಪ್ರೇಕ್ಷಕರು ಯಾವ ತೀರ್ಪು ಕೊಡುತ್ತಾರೆ ಎಂಬ ಕುತೂಹಲ ಇದೆ. ಎಲ್ಲರಿಗೂ ಥ್ಯಾಂಕ್ಸ್‌’ ಎಂದು ಮಾತು ಮುಗಿಸಿದರು.
ಇದೊಂದು ಅದ್ಭುತ ಸಿನಿಮಾ ಎಂದು ನೀವೇ ಹೇಳುತ್ತೀರಾ ಅಂತಲೇ ಮಾತು ಪ್ರಾರಂಭಿಸಿದರು ಉಪೇಂದ್ರ. “ಎಲ್ಲಾ ಅಂಶಗಳಿರುವ ಕಮರ್ಷಿಯಲ್‌ ಚಿತ್ರ ಇದು. ಬಿರಿಯಾನಿ ಬಯಸುವವರಿಗೆ ಬಿರಿಯಾನಿಯೂ ಸಿಗುತ್ತದೆ. ಚಿತ್ರಾನ್ನ ಬೇಕು ಎನ್ನುವವರಿಗೆ ಚಿತ್ರಾನ್ನವೂ ಸಿಗುತ್ತದೆ. ಒಟ್ಟಿನಲ್ಲಿ ಇಡೀ ಕುಟುಂಬ ನೋಡಬಹುದಾದಂತಹ ಸಿನಿಮಾ. ನಿರ್ದೇಶಕ ಲೋಕಿ ಮತ್ತು ಪ್ರೇಮ ಒಳ್ಳೆಯ ಸ್ನೇಹಿತರು. ಜಗಳ ಮಾಡಿಕೊಂಡೇ ಜೊತೆಗಿದ್ದರು. ಶ್ರೀಧರ್‌ ಸಂಭ್ರಮ್‌ ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಅದರಲ್ಲಿ ಒಂದು ಸೂಪರ್‌ ಹಿಟ್‌ ಆಗಿದೆ. ಈ ಚಿತ್ರದಿಂದ ನಿರ್ಮಾಪಕರಿಗೆ ಒಳ್ಳೆಯದಾಗಲಿ’ ಎಂದರು.

ಇನ್ನು ಉಳಿದವರೆಲ್ಲಾ ಒಂದೊಂದೇ ಮಾತಾಡಿ ಪತ್ರಿಕಾಗೋಷ್ಠ ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next