Advertisement
ಹೌದು, ಪುನೀತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ಇದೇ ಮಾ. 15ಕ್ಕೆ “ಮಹಾನುಭಾವ ನೀನಯ್ಯಾ…’ ಎಂಬ ಹೆಸರಿನಲ್ಲಿ ಮ್ಯೂಸಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗುತ್ತಿದ್ದು, ಭಾರತೀಯ ಚಿತ್ರರಂಗದ ನಾಲ್ವರು ಪ್ರಖ್ಯಾತ ಗಾಯಕರಾದ ಸೋನು ನೀಗಂ, ಕೈಲಾಶ್ ಖೇರ್, ಶಂಕರ್ ಮಹಾದೇವನ್, ವಿಜಯ ಪ್ರಕಾಶ್ ಈ ಹಾಡಿಗೆ ಧ್ವನಿಯಾಗುವ ಮೂಲಕ ಪುನೀತ್ ಗುಣಗಾನ ಮಾಡಿದ್ದಾರೆ.
Related Articles
Advertisement
ಈ ಬಗ್ಗೆ ಮಾತನಾಡುವ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, “ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ನಾಲ್ವರು ಪ್ರಖ್ಯಾತ ಗಾಯಕರು ಒಬ್ಬ ಸೂಪರ್ ಸ್ಟಾರ್ ನಟನನ್ನು ಸ್ಮರಿಸಿ ಹಾಡಿರುವ ಹಾಡು ಇದಾಗಿದೆ. ಪುನೀತ್ ರಾಜಕುಮಾರ್ ಮೇಲಿನ ಪ್ರೀತಿಯಿಂದ ಯಾರೊಬ್ಬರೂ ಸಂಭಾವನೆ ಪಡೆಯದೇ ಈ ಗೀತೆಗೆ ಧ್ವನಿಯಾಗಿದ್ದಾರೆ. ಇತರ ತಂತ್ರಜ್ಞರು ಕೂಡ ಪುನೀತ್ ರಾಜಕುಮಾರ್ ಅವರಿಗೆ ಗೌರವಾರ್ಥವಾಗಿ ಈ ಹಾಡಿಗೆ ಕೆಲಸ ಮಾಡಿದ್ದಾರೆ. ಸುಮಾರು ಒಂದು ತಿಂಗಳ ಪರಿಶ್ರಮದ ಬಳಿಕ ಈ ಹಾಡು ಸಿದ್ಧವಾಗಿದೆ. ಈ ಕಾರ್ಯಕ್ಕೆ ಅನೇಕ ಅಭಿಮಾನಿಗಳು ಕೈ ಜೋಡಿಸುತ್ತಿದ್ದಾರೆ. ಈ ಹಾಡಿನಿಂದ ಬರುವ ಹಣವನ್ನು ಅಪ್ಪು ಅವರ ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ’ ಎಂದಿದ್ದಾರೆ.
ಅಂದಹಾಗೆ, “ಮಹಾನುಭಾವ ನೀನಯ್ಯಾ…’ ಮ್ಯೂಸಿಕ್ ವಿಡಿಯೋ ಹಾಡು ಮಾರ್ಚ್. 15ರಂದು “ಸಂಭ್ರಮ್ ಸ್ಟುಡಿಯೋಸ್’ ಯು-ಟ್ಯೂಬ್ ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ.