Advertisement

ಶ್‌ -2ಗೆ ಸಾಂಗ್‌ ರೆಕಾರ್ಡಿಂಗ್‌ ಶುರು

01:47 PM Jul 17, 2020 | mahesh |

27 ವರ್ಷಗಳ ಹಿಂದೆ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಶ್‌ ಚಿತ್ರ ಕನ್ನಡ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈಗ ಅದೇ ಹೆಸರಿನಲ್ಲಿ “ಶ್‌-2′ ಚಿತ್ರ ನಿರ್ಮಾಣವಾಗುತ್ತಿದೆ. ಡಿ.ಪಿ.ಕಂಬೈನ್ಸ್‌ ಮೂಲಕ ಉದ್ಯಮಿ ಡಿ.ಪಿ.ವೆಂಕಟೇಶ್‌ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

Advertisement

ಡಿ.ಪಿ.ವೆಂಕಟೇಶ್‌ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಮನೋಹರ್‌ ಸಂಗೀತ ನೀಡುತ್ತಿದ್ದಾರೆ. ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್‌ನ ಪಾರೇಕ್‌ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಆರಂಭವಾಗಿದೆ. ನನ್ನ ಆಪ್ತ ಸ್ನೇಹಿತ ಮಹೇಶ್‌ ಹುಟ್ಟುಹಬ್ಬ. ಹಾಗಾಗಿ ಅಂದಿನಿಂದ ಚಿತ್ರದ ಹಾಡುಗಳ ಧ್ವನಿಮುದ್ರಣ ಆರಂಭಿಸಿರುವುದಾಗಿ ನಿರ್ಮಾಪಕ – ನಿರ್ದೇಶಕ ಡಿ.ಪಿ.ವೆಂಕಟೇಶ್‌ ತಿಳಿಸಿದ್ದಾರೆ. ಕೋವಿಡ್ ಹಾವಳಿ ಕಡಿಮೆಯಾದ ನಂತರ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮಡಿಕೇರಿಯಲ್ಲಿ 40 ದಿನಗಳ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ 3 ಸಾಹಸ ಸನ್ನಿವೇಶಗಳಿದ್ದು, ಥ್ರಿಲ್ಲರ್‌ ಮಂಜು, ಕೌರವ ವೆಂಕಟೇಶ್‌ ಸಾಹಸ ಸಂಯೋಜನೆ ಮಾಡಲಿಕೋವಿಡ್ರೆ. ಚಿತ್ರದ ನಾಯಕನ ಪಾತ್ರಕ್ಕಾಗಿ ಕನ್ನಡದ ಖ್ಯಾತ ನಟರೊಂದಿಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕಲಾವಿದರ ಹಾಗೂ ಉಳಿದ ತಂತ್ರಜ್ಞರ ಮಾಹಿತಿ ನೀಡುವುದಾಗಿ ಡಿ.ಪಿ.ವೆಂಕಟೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next