Advertisement

Vinod Prabhakar; ‘ರುಕ್ಕೋ ರುಕ್ಕೋ ರೋಮಿಯೋ…’ ಫೈಟರ್ ಹಾಡು ಬಂತು

11:22 AM Sep 15, 2023 | Team Udayavani |

ವಿನೋದ್‌ ಪ್ರಭಾಕರ್‌ ನಟನೆಯ “ಫೈಟರ್‌’ ಚಿತ್ರದ ಹಾಡು ಬಿಡುಗಡೆಯಾಗಿದೆ. “ಐ ವಾನಾ ಫಾಲೋ ಯೂ… ರುಕ್ಕೋ ರುಕ್ಕೋ ರೋಮಿಯೋ, ನನ್ನ ಕಡೆ ನೋಡಯ್ಯೋ…’ ಎಂಬ ಹಾಡು ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿನೋದ್‌ ಪ್ರಭಾಕರ್‌ ಹಾಗೂ ಲೇಖಾಚಂದ್ರ ಈ ಹಾಡಿನಲ್ಲಿ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಮಾಸ್‌ ಟೀಸರ್‌ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಹಾಡಿನ ಸರದಿ.

Advertisement

ಇನ್ನು, ಈಗಾಗಲೇ ಬಿಡುಗಡೆಯಾಗಿರುವ ಹಾಡಿಗೆ ಗುರುಕಿರಣ್‌ ಸಂಗೀತವಿದ್ದು, ಕವಿರಾಜ್‌ ಸಾಹಿತ್ಯವಿದೆ. ಚೈತ್ರಾ ಹಾಡಿರುವ ಈ ಹಾಡಿಗೆ ಮೋಹನ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಪಾಂಡಿಚೇರಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಇಬ್ಬರ ನಾಯಕಿಯರಿದ್ದು, ಅದನ್ನು ಪಾವನಾ ಹಾಗೂ ಲೇಖಾಚಂದ್ರ ನಿರ್ವಹಿಸಿದ್ದಾರೆ. ನಟಿ ನಿರೋಷಾ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಅಂದಹಾಗೆ, ಇದೊಂದು ಫ್ಯಾಮಿಲಿ ಡ್ರಾಮಾವಾಗಿದ್ದು, ಅನ್ಯಾಯದ ವಿರುದ್ಧ ನಾಹಯಕ ನಿಂತಾಗ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಆಕಾಶ್‌ ಎಂಟರ್‌ಪ್ರೈಸಸ್‌ ಬ್ಯಾನರ್‌ನಡಿ

ಸೋಮಶೇಖರ್‌ ಕಟ್ಟಿಗೇನಹಳ್ಳಿ ಈ ಚಿತ್ರವನ್ನು ನೂತನ್‌ ಉಮೇಶ್‌ ನಿರ್ದೇಶಿಸಿದ್ದಾರೆ. ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ. “ಫೈಟರ್‌ನಲ್ಲಿ ಬರೀ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ- ತಾಯಿ ಹಾಗೂ ಮಗನ ಬಾಂಧವ್ಯದ ಸನ್ನಿವೇಶಗಳು ಎಲ್ಲರ ಮನ ಮುಟ್ಟಲಿದೆ. ಜೊತೆಗೆ ಥ್ರಿಲ್ಲರ್‌ ಅಂಶಗಳನ್ನ ಒಳಗೊಂಡ ಕೌಟುಂಬಿಕ ಮನರಂಜನೆಯ ಚಿತ್ರ ಇದಾಗಿದೆ ಎನ್ನು ತ್ತಾರೆ ವಿನೋದ್‌ ಪ್ರಭಾಕರ್.

Advertisement

Udayavani is now on Telegram. Click here to join our channel and stay updated with the latest news.

Next