Advertisement

Abhishek Ambareesh; ಬ್ಯಾಡ್ ಮ್ಯಾನರ್ಸ್ ನಿಂದ ‘ಓಗ.. ಓಗ.’ ಹಾಡು ಬಂತು

12:48 PM Sep 12, 2023 | Team Udayavani |

ಸೂರಿ ನಿರ್ದೇಶನದ, ಅಭಿಷೇಕ್‌ ಅಂಬರೀಶ್‌ ನಾಯಕರಾಗಿರುವ “ಬ್ಯಾಡ್‌ ಮ್ಯಾನರ್’ ಚಿತ್ರದ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದಿದೆ. ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.

Advertisement

ಇಂದು ಚಿತ್ರದ “ಓಗ ಓಗ’ ಎಂಬ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಟೈಟಲ್‌ ಟ್ರ್ಯಾಕ್‌ ಹಾಗೂ ಸಾರಾಯಿ ಎಂಬ ಹಾಡು ರಿಲೀಸ್‌ ಆಗಿ ಹಿಟ್‌ಲಿಸ್ಟ್‌ ಸೇರಿದೆ. ಈಗ “ಓಗ ಓಗ’ ಸರದಿ. ಈ ಹಾಡು ಇಂದು ಬೆಳಗ್ಗೆ 11.04ಕ್ಕೆ ಆನಂದ್‌ ಆಡಿಯೋ ಯೂ ಟ್ಯೂಬ್‌ನಲ್ಲಿ ರಿಲೀಸ್‌ ಆಗಿದೆ.

ಚರಣ್‌ ರಾಜ್‌ ಸಂಗೀತದ ಈ ಹಾಡನ್ನು ಕಪಿಲ್‌ ಕಪಿಲನ್‌ ಹಾಡಿದ್ದು, ಜಯಂತ್‌ ಕಾಯ್ಕಿಣಿ ಸಾಹಿತ್ಯವಿದೆ. ಸಂಗೀತ ನಿರ್ದೇಶಕ ಚರಣ್‌ ಹೇಳುವಂತೆ, ಓಗ ಓಗ ಎಂಬುದು ಗ್ರಿಬಿಶ್‌ ಪದವಂತೆ. ತುಂಬಾ ಸಂತೋಷವಾದಾಗ ಗುನುಗುವ ಪದ ಎನ್ನುತ್ತಾರೆ.

ಇನ್ನು, ಈ ಸಿನಿಮಾದಲ್ಲಿ ಅಭಿಷೇಕ್‌ ಆ್ಯಕ್ಷನ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಪಕ್ಕಾ ಸೂರಿ ಶೈಲಿಯ ಸಿನಿಮಾ ಇದಾಗಿದ್ದು, ಚಿತ್ರರಂಗ ಕೂಡಾ ಈ ಸಿನಿಮಾ ಮೇಲೆ ಒಂದು ಕಣ್ಣಿಟ್ಟಿದೆ. ಸುಧೀರ್‌ ಕೆ ಎಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next