Advertisement

ಇಲ್ನೋಡಿ ಕಾರ್‌…

08:03 PM Oct 05, 2020 | Suhan S |

ಈಗಾಗಲೇ ಕಿಯಾ ಸೆಲ್ಟೋಸ್‌ ಮೂಲಕ ಮಾರುಕಟ್ಟೆಯಲ್ಲಿ ಜೋರು ಸದ್ದು ಮಾಡುತ್ತಿರುವ ದಕ್ಷಿಣ ಕೊರಿಯಾದ ಕಿಯಾ ಕಂಪನಿ, ಮತ್ತೂಂದು ಎಸ್‌ಯುವಿಯನ್ನು ಭಾರತದ ರಸ್ತೆಗೆ ಬಿಟ್ಟಿದೆ. ದೇಶದ ಮಧ್ಯಮ ವರ್ಗವನ್ನೂ ಟಾರ್ಗೆಟ್‌ ಮಾಡಿಕೊಂಡಿರುವ ಕಿಯಾ ಕಂಪನಿ, 10 ಲಕ್ಷದದ ‌ ಒಳಗೆ ಉತ್ತಮ ಫೀಚರ್ ಗಳುಳ್ಳ‌  ಪ್ರೀಮಿಯಂ ಎಸ್‌ಯುವಿ ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹುಂಡೈ ವೆನ್ಯು, ಫೋರ್ಡ್‌ ಎಕೋನ್ಪೋರ್ಟ್‌, ಟಾಟಾ ನಿಕ್ಸೋನ್‌, ಮಾರುತಿ ಸುಜುಕಿ ವಿಟಾರಾ ಬ್ರೀಝಾಗೆ ಕಿಯಾ ಸೋನೆಟ್‌ ಸ್ಪರ್ಧೆ ಕೊಟ್ಟಿದೆ. ವಿಶೇಷವೆಂದರೆ ಕಿಯಾ ಸೋನೆಟ್‌ ಅನ್ನು ಹುಂಡೈ ವೆನ್ಯು ರೀತಿಯಲ್ಲೇ ಅಭಿವೃದಿಟಛಿ ಪಡಿಸಲಾಗಿದೆ. ಆದರೆ, ಫೀಚರ್‌ಗಳ ಮತ್ತು ವಿನ್ಯಾಸದ ಲೆಕ್ಕಾಚಾರದಲ್ಲಿ ವೆನ್ಯುಗಿಂತ ಒಂದು ಹೆಜ್ಜೆ ಮುಂದೆಯೇ ಇದೆ. ಹೊರಾಂಗಣದಲ್ಲೂ ನ್ಪೋರ್ಟಿ ಡಿಸೈನ್‌ ಮೂಲಕ ಮನ ಸೆಳೆಯುವಂತಿರುವ ಈ ಕಾರಿನ ಒಳಾಂಗಣವೂ, ಸ್ಟೈಲಿಷ್‌ ಆಗಿದೆ.

Advertisement

10.25 ಇಂಚಿನ ಇನ್ಫೋಟೈನ್ಮೆಂಟ್‌, ಡಿಜಿಟಲ್‌ ಮತ್ತು ಆನ್ಲಾಗ್‌ ಮಿಶ್ರಿತ ಡಿಸ್‌ಪ್ಲೇ, ವೈರೆಲಸ್‌ ಚಾರ್ಜಿಂಗ್‌ ಪಾಯಿಂಟ್‌ಗಳ ಫೀಚರ್‌ಗಳಿವೆ. ಈ ಕಾರಿನ ವಿಶೇಷ ಸನ್ರೂಫ್. ಹಾಗೆಯೇ, ಗಾಳಿಯ ಶುದಿಟಛೀಕರಣ ವ್ಯವಸ್ಥೆಯೂ ಇದ್ದು, ಇದು ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುತ್ತದೆ. ರಿಮೋಟ್‌ ಸ್ಟಾರ್ಟಿಂಗ್‌ ಫೀಚರ್‌, ಫ್ರಂಟ್‌ ಪಾರ್ಕಿಂಗ್‌ ಸೆನ್ಸರ್‌, ಎಲ್ ಇಡಿ ಮೂಡ್‌ ಲೈಟ್‌ ಈ ಕಾರಿಗೆ ಬೇರೆಯದ್ದೇ ಮೆರಗು ನೀಡಿವೆ. ಭದ್ರತೆ ದೃಷ್ಟಿಯಲ್ಲಿ ಇದು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ. ವಾಯ್ಸ ಕಂಟ್ರೋಲ್‌ ವ್ಯವಸ್ಥೆ ಉತ್ತಮವಾಗಿದೆ. ಇದನ್ನು ಬಳಸಿಕೊಂಡೇ ನೆವಿಗೇಶನ್‌, ಎಸಿಯನ್ನು ನಿಯಂತ್ರಿಸಬಹುದು. ಅಂದಹಾಗೆ ಇದು ಮೂರು ಎಂಜಿನ್‌ಗಳ ಆಯ್ಕೆಯಲ್ಲಿ ಸಿಗುತ್ತದೆ. 1.0 ಲೀ. ಟರ್ಬೋ ಚಾರ್ಜ್ಡ್ ಪೆಟ್ರೋಲ್, 1.2 ಲೀ.ನ್ಯಾಚುರಲಿ ಆಸ್ಪ್ರೆರ್ಡ್‌ ಪೆಟ್ರೋಲ್, 1.5 ಲೀ. ಡೀಸೆಲ್‌ ಎಂಜಿನ್ನಲ್ಲೂ ಸಿಗುತ್ತದೆ.

 

-ಸಿ.ಜೆ. ಸೋಮಶೇಖರ

Advertisement

Udayavani is now on Telegram. Click here to join our channel and stay updated with the latest news.

Next