Advertisement
ಕಳೆದ ಡಿಸೆಂಬರ್‌ನಲ್ಲಿ ಸೋಣಂಗೇರಿ ಬಳಿ ಹೊಸಗದ್ದೆ ತಿರುವಿನ ಮುಖ್ಯ ರಸ್ತೆಯ ಬದಿ ಕುಸಿದು, ರಸ್ತೆ ಸಂಚಾರಕ್ಕೆ ಆತಂಕ ಎದುರಾಗಿತ್ತು.
ಪೈಚಾರು-ಸೋಣಂಗೇರಿ ರಸ್ತೆ ವಿಸ್ತರಣೆಯೊಂದಿಗೆ ಅಭಿವೃದ್ಧಿ ಪಡಿಸಲು 5 ಕೋಟಿ ರೂ.ಗಳ ಯೋಜನೆ ಸಿದ್ಧಗೊಳಿಸಲಾಗಿತ್ತು. ಅದರೊಂದಿಗೆ ಕುಸಿದಿರುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲು 50 ಲಕ್ಷ ರೂ.ಗಳ ಪ್ರತ್ಯೇಕ ಪ್ರಸ್ತಾವ ಸಲ್ಲಿಸಿ ಮಳೆಗಾಲ ದೊಳಗೆ ಕಾಮಗಾರಿ ನಡೆಸುವ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ತಿಳಿಸಿದ್ದರು. ಆದರೆ ಈ ಎರಡೂ ಅನುದಾನಗಳು ಪ್ರಸ್ತಾವನೆ ಹಂತದಲ್ಲಿ ಬಾಕಿ ಆಗಿದ್ದು, ಅನುದಾನ ಬಿಡುಗಡೆ ಆಗಿಲ್ಲ.
Related Articles
ಈ ಪ್ರದೇಶದಲ್ಲಿ ಮರ,ಗೆಲ್ಲು ರಸ್ತೆಗೆ ಚಾಚಿ ಅಪಾಯ ಆಹ್ವಾನಿಸಿದೆ. ಮಳೆಗಾಲ ಆರಂಭಗೊಂಡಲ್ಲಿ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆಯ ಇನ್ನೊಂದು ಬದಿಯ ಎತ್ತರದ ಪ್ರದೇಶ ಅಗೆದು ರಸ್ತೆ ಅಗಲಗೊಳಿಸುವ ಪ್ರಯತ್ನ ನಡೆಸಿದ್ದಾರೆ.ಆದರೆ ಶಾಶ್ವತ ವ್ಯವಸ್ಥೆ ಆಗದಿದ್ದರೆ ಪ್ರಯೋಜನ ದೊರೆಯದು ಎನ್ನುತ್ತಾರೆ ಸ್ಥಳೀಯರು.
Advertisement