ಪಣಜಿ: ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಗಳಾದ ದತ್ತಪ್ರಸಾದ್ ಗಾಂವ್ಕರ್ ಮತ್ತು ರಾಮದಾಸ್ ಅಲಿಯಾಸ್ ರಾಮ ಮಾಂದ್ರೇಕರ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಎನ್‍ಡಿಪಿಎಸ್ ನ್ಯಾಯಾಲಯ ರೂ. ತಲಾ 15,000 ರೂ.ಗಳ ಇಬ್ಬರು ಸ್ಥಳೀಯ ಶ್ಯೂರಿಟಿಗಳೊಂದಿಗೆ ಇಬ್ಬರಿಗೆ ಜಾಮೀನು ನೀಡಲಾಗಿದೆ. ಎನ್‍ಡಿಪಿಎಸ್ ನ್ಯಾಯಾಲಯ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇದನ್ನೂ ಓದಿ: ಸೋನಾಲಿ ಫೋಗಟ್ ಸಾವಿನ ಸಿಬಿಐ ತನಿಖೆ ಚುರುಕು: ಹಲವರ ತೀವ್ರ ವಿಚಾರಣೆ
ಮಾಪ್ಸಾ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕರ್ಲಿಸ್ ರೆಸ್ಟೋರೆಂಟ್ ಚಾಲಕ ಎಡ್ವಿನ್ ನುನಿಸ್ ಅವರಿಗೆ ಸಪ್ಟೆಂಬರ್ 7 ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಅವರು ಈ ಹಿಂದೆ ಸೋನಾಲಿ ಫೋಗಟ್ ಸಾವಿನ ಪ್ರಕರಣದಲ್ಲಿ ಸಂಬಂಧ ಹೊಂದಿದ್ದರು. ಆದರೆ, ಶಂಕಿತ ವ್ಯಕ್ತಿಯನ್ನು ಕರ್ಲಿ ರೆಸ್ಟೋರೆಂಟ್‍ಗೆ ಹೋಗಲು ಬಿಡಬಾರದು ಎಂಬ ಮಹತ್ವದ ಷರತ್ತು ವಿಧಿಸಲಾಗಿದೆ. ಆ ಬಳಿಕ ಶಂಕಿತ ಆರೋಪಿಗಳಾದ ದತ್ತಪ್ರಸಾದ್ ಗಾಂವ್ಕರ್ ಮತ್ತು ರಾಮದಾಸ್ ಅಲಿಯಾಸ್ ರಾಮ ಮಾಂದ್ರೇಕರ್ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಈ ನಡುವೆ ಸೋನಾಲಿ ಫೋಗಟ್ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳ ತಂಡ ತೀವ್ರಗೊಳಿಸಿದೆ. ಅದಾದ ಬಳಿಕ ಭಾನುವಾರ ಬೆಳಗ್ಗೆ ಸಿಬಿಐ ತಂಡ ಕರ್ಲಿಸ್ ಕಡೆಗೆ ತೆರಳಿ, ಎರಡು ಗಂಟೆಗಳ ಕಾಲ ಅಲ್ಲಿನ ಶೌಚಾಲಯದಲ್ಲಿ ಸೋನಾಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸ್ಥಳವನ್ನು ಪರಿಶೀಲಿಸಿದ್ದಾರೆ.