Advertisement

ನಟ್ವರ್ ಲಾಲ್ ಗೆ ನಾಯಾಕಿಯಾದ ಜತೆ ಸೋನಾಲ್‌

01:22 PM Jan 20, 2023 | Team Udayavani |

ಕೆಲ ತಿಂಗಳ ಹಿಂದಷ್ಟೇ ಸೋನಾಲ್‌ ಮಾಂತೇರೊ ಅಭಿನಯದ “ಬನಾರಸ್‌’ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ತೆರೆಕಂಡಿತ್ತು. ಈಗ ಸೋನಾಲ್‌ ಅಭಿನಯದ ಮತ್ತೂಂದು ಪ್ಯಾನ್‌ ಇಂಡಿಯಾ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಮಿ. ನಟ್ವರ್ ಲಾಲ್’.

Advertisement

“ತನುಶ್‌ ಸಿನಿಮಾಸ್‌’ ಬ್ಯಾನರಿನಲ್ಲಿ ತನುಶ್‌ ಶಿವಣ್ಣ ನಿರ್ಮಿಸಿ ಜೊತೆಗೆ ನಾಯಕನಾಗಿರುವ ಈ ಸಿನಿಮಾದಲ್ಲಿ ಸೋನಾಲ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿನಿಮಾ ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ಬರುತ್ತಿದ್ದು, ವಿ. ಲವ ಈ ಸಿನಿಮಾಕ್ಕೆ ಆ್ಯಕ್ಷನ್ -ಕಟ್‌ ಹೇಳಿದ್ದಾರೆ. ಈಗಾಗಲೇ ಸದ್ದಿಲ್ಲದೆ “ಮಿ. ನಟ್ವರ್ ಲಾಲ್ ‘ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟೀಸರ್‌ ಬಿಡುಗಡೆ ಮಾಡಿದೆ.

ಇದೇ ವೇಳೆ “ಮಿ. ನಟ್ವರ್ ಲಾಲ್ ‘ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ವಿ. ಲವ, “ಇದೊಂದು ಕ್ರೈಂ-ಥ್ರಿಲ್ಲರ್‌ ಕಥಾಹಂದರದ ಸಿನಿಮಾ. ಇಂದಿನ ಡಿಜಿಟಲ್‌ ಯುಗದಲ್ಲಿ, ಟೆಕ್ನಾಲಜಿಯನ್ನು ಬಳಸಿಕೊಂಡು ಜನರನ್ನು ಹೇಗೆಲ್ಲ ಯಾಮಾರಿಸಿ, ಹಣವನ್ನು ದೋಚುತ್ತಾರೆ ಎಂಬ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌, ಎಮೋಶನ್ಸ್‌ ಎಲ್ಲವೂ ಸಿನಿಮಾದಲ್ಲಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಸಿನಿಮಾ ಮಾಡಲಾಗಿದೆ’ ಎಂದು ವಿವರಣೆ ನೀಡಿದರು.

ಇದನ್ನೂ ಓದಿ:ಮಂಗಳೂರು ಡಾಕ್ಟರ್ಸ್ ಡ್ರಗ್ಸ್ ಕೇಸ್: ಏಳು ವಿದ್ಯಾರ್ಥಿಗಳು, ಇಬ್ಬರು ವೈದ್ಯರ ಅಮಾನತು

ಸಿನಿಮಾದಲ್ಲಿ ನಾಯಕ ತನುಶ್‌ “ಮಿ. ನಟ್ವರ್ ಲಾಲ್ ‘ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಭಾರತದಲ್ಲಿ ಕಿಂಗ್‌ ಕಾನ್‌ ಎಂದೇ ಕರೆಸಿಕೊಳ್ಳುತ್ತಿದ್ದ ವಂಚಕ ನಟ್ವರ್ ಲಾಲ್ ಪಾತ್ರದಿಂದ ಪ್ರೇರಣೆ ಪಡೆದುಕೊಂಡು ಈ ಸಿನಿಮಾ ಮಾಡಲಾಗಿದೆ. ಹಲವು ಇಂಟರೆಸ್ಟಿಂಗ್‌ ಸಂಗತಿಗಳು ಸಿನಿಮಾದಲ್ಲಿದೆ. ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿದ್ದೇವೆ’ ಎನ್ನುವುದು ನಟ ಕಂ ನಿರ್ಮಾಪಕ ತನುಶ್‌ ಮಾತು.

Advertisement

“ಮಿ. ನಟ್ವರ್ ಲಾಲ್ ‘ ಸಿನಿಮಾದಲ್ಲಿ ತನುಶ್‌ ಅವರಿಗೆ ಸೋನಾಲ್‌ ಮಾಂತೇರೊ ನಾಯಕಿಯಾಗಿದ್ದು, ನಂದಿನಿ ಎಂಬ ಸೋಶಿಯಲ್‌ ವರ್ಕರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಈ ವರ್ಷದ ಆರಂಭದಲ್ಲಿಯೇ ನಾನು ನಾಯಕಿಯಾಗಿರುವ “ಮಿ. ನಟ್ವರ್ ಲಾಲ್ ‘ ಪ್ಯಾನ್‌ ಇಂಡಿಯಾ ಸಿನಿಮಾಗಿ ಬಿಡುಗಡೆ ಆಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಮತ್ತು ಕಥೆಯ ಮೇಲೆ ಸಾಕಷ್ಟು ನಿರೀಕ್ಷೆಯಿದೆ’ ಎಂಬುದು ಸೋನಾಲ್‌ ಮಾತು.  ಇದೇ ಫೆಬ್ರವರಿ ಅಥವಾ ಮಾರ್ಚ್‌ ವೇಳೆಗೆ “ಮಿ. ನಟ್ವರ್ ಲಾಲ್ ತೆರೆಗೆ ಬರಲಿದೆ

Advertisement

Udayavani is now on Telegram. Click here to join our channel and stay updated with the latest news.

Next