Advertisement

ಸೋಮವಾರಪೇಟೆ ತಾ. ಪಂ.ಸಾಮಾನ್ಯ ಸಭೆ 

06:15 AM Sep 06, 2018 | Team Udayavani |

ಸೋಮವಾರಪೇಟೆ: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಹಾಗೂ ಮನೆ,ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಜಿಲ್ಲಾಡಳಿತ ತಕ್ಷಣವೇ ಪರಿಹಾರ ಧನ ನೀಡಬೇಕೆಂದು ಇಲ್ಲಿನ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ತಾಲೂಕು ಪಂಚಾಯತ್‌ ಸಾಮಾನ್ಯ ಸಭೆ ಮಂಗಳವಾರ ಅಧ್ಯಕ್ಷೆ ಪುಷ್ಪ ರಾಜೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು. 

Advertisement

ಕೋಟೆಬೆಟ್ಟ ತಪ್ಪಲು ಪ್ರದೇಶ ಸೇರಿದಂತೆ ಬಿಳಿಗೇರಿ ಸೇರಿದಂತೆ ಹಲವು ಭಾಗಗಳಲ್ಲಿ ಪ್ರಭಾವಿ ಕಾಫಿ ಸಂಸ್ಥೆಯ ಮಾಲಕರು, ಉಧ್ಯಮಿಗಳು ರೆಸಾರ್ಟ್‌ ಗಳನ್ನು ನಡೆಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರೆಸಾರ್ಟ್‌ ಪರವಾನಗಿ ನವೀಕರಣ ಸಂದರ್ಭ ಅನುಮತಿ ನೀಡುವಾಗ ಪಂಚಾಯತ್‌ ಅಭಿವೃದ್ದಿ ಅಧಿಕಾರಿಗಳು ಪುನರ್‌ ಪರಿಶೀಲಿಸಬೇಕು . ಯಾವುದೇ ರೆಸಾರ್ಟ್‌ಗಳಲ್ಲಿ ಸದ್ಯಕ್ಕೆ ಕಾಮಗಾರಿಗಳು ನಡೆಸಲು ಅವಕಾಶ ನೀಡಬಾರದು ಎಂದು ತಾಲೂಕು  ಪಂಚಾಯತ್‌ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್‌ ಅವರು ಹೇಳಿದರು. ಪ್ರಕೃತಿ ವಿಕೋಪಕ್ಕೆ ತುತ್ತಾದ ಸ್ಥಳಗಳಲ್ಲಿ ಮನೆ ಮತ್ತು ತೋಟಗಳನ್ನು ತೊರೆದು ನಿರಾಶ್ರಿತರ ಕೇಂದ್ರಗಳಲ್ಲಿ ನೆಲೆಸಿರು ವವರಿಗೆ ತತ್‌ಕ್ಷಣವೇ  3,800ರೂ ಪರಿಹಾರ ಧನದ ಚೆಕ್‌ ನೀಡ ಬೇಕು. ಮಾದಾಪುರ, ಪಂಚಾಯತ್‌ ವ್ಯಾಪ್ತಿಯಲ್ಲಿ ಹೆಚ್ಚಿನ ನಿರಾಶ್ರಿತರು ಇದ್ದಾರೆ. ಅವರನ್ನು ನಿರ್ಲಕ್ಷಿಸಿರುವುದು ದುರಂತ ಎಂದು ಅಭಿಮನ್ಯು ಕುಮಾರ್‌, ಬಿ.ಬಿ.ಸತೀಶ್‌ ಹೇಳಿದರು. 

ನಿರಾಶ್ರಿತರ ಹೆಸರಿನಲ್ಲಿ ಅಕ್ರಮವಾಗಿ ಬಾಂಗ್ಲ ವಲಸಿಗರಿಗೆ ವ್ಯವಸ್ಥೆ ಕಲ್ಪಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಬಲ್ಲಾರಂಡ ಮಣಿ ಮುತ್ತಪ್ಪ ಅವರು ಆಗ್ರಹಿಸಿದರು. 

ಪರಿಹಾರ  ಕೇಂದ್ರಗಳಲ್ಲಿ ನಿರಾಶ್ರಿತ ರಲ್ಲದವರು ವಾಸ ಮಾಡುತ್ತಿದ್ದಾರೆ. ಪರಿಹಾರ ಸಾಮಗ್ರಿಗಳು ಸಮರ್ಪಕವಾಗಿ ನಿರಾಶ್ರಿತರಿಗೆ ದೊರಕುತ್ತಿಲ್ಲ.
 
ಕಂದಾಯ ಇಲಾಖೆಯವರು ಇದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಗ್ರಾಮೀಣ ಭಾಗದಲ್ಲಿ ಸಂಕಷ್ಟ ಪಡುತ್ತಿರುವ ನಿರಾಶ್ರಿತರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಅಭಿಮನ್ಯುಕುಮಾರ್‌ ಹೇಳಿದರು. 

ಗರ್ವಾಲೆ ವಿಭಾಗದಲ್ಲಿ ಎ.ಪಿ.ಎಲ್‌ ಮತ್ತು ಬಿಪಿಎಲ್‌ ಪಡಿತರ ಚೀಟಿಯನ್ನು 476 ಜನರು ಪಡೆದಿದ್ದಾರೆ. ಆದರೆ ಅನ್ನಭಾಗ್ಯ ಯೋಜನೆಯಡಿ 173 ಆಹಾ‌ರದ ಕಿಟ್‌ಗಳನ್ನು ನೀಡಲಾಗಿದೆ. ನಿರಾಶ್ರಿತರು ಹೆಚ್ಚಿನ ಸಂಖೆಯಲ್ಲಿ ಇಲ್ಲದ ಮತ್ತು ಅನರ್ಹರಿಗೆ ಕಿಟ್‌ಗಳನ್ನು ನೀಡಲಾಗಿದೆ. 

Advertisement

ಕ್ಯಾನ್‌ಗಳನ್ನು ಕೊಟ್ಟಿದ್ದಾರೆ. ಆದರೆ ಸೀಮೆಎಣ್ಣೆಯನ್ನು ಇನ್ನೂ ವಿತರಣೆ  ಮಾಡದೇ ಇರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕ್ರಮವನ್ನು ಅಭಿಮನ್ಯು ಕುಮಾರ್‌ ಖ‌ಂಡಿಸಿದರು.ಗಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರನ್ನಾಗಿ ತಾ. ಪಂ. ಸದಸ್ಯೆ ತಂಗಮ್ಮ ಅವರನ್ನು ಆಯ್ಕೆ ಮಾಡಲಾಯಿತು. ಮಾಜಿ ಪ್ರಧಾನಿ ವಾಜಪೇಯಿ ಮತ್ತು ಪ್ರಾಕೃತಿಕ ವಿಕೋಪ ದಲ್ಲಿ  ಮಡಿದವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. 

ಗರ್ವಾಲೆ ಗ್ರಾಮ ಪಂಚಾಯತ್‌ ಅಭಿವೃದ್ದಿ ಅಧಿಕಾರಿ ಯಾವುದೇ ಕೆಲಸ ಕಾರ್ಯ ಗಳಿಗೆ ಸ್ಪಂದಿಸುತ್ತಿಲ್ಲ. ಅವರನ್ನು ತತ್‌ಕ್ಷಣವೇ ವರ್ಗಾವಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್‌ ಅವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next