Advertisement

ದೇಸಿ ಸೊಗಡಿನ “ಸೋಮು ಸೌಂಡ್‌ ಇಂಜಿಯರ್‌’

04:21 PM Oct 18, 2022 | Team Udayavani |

ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಪ್ರಯೋಗದ ಚಿತ್ರಗಳಿಗೆ ಪ್ರೇಕ್ಷಕ ಜೈಕಾರ ಹಾಕುತ್ತಿದ್ದಾನೆ.ರೆಗ್ಯುಲರ್‌ ಪ್ಯಾಟರ್ನ್ ಬಿಟ್ಟು ವಿಭಿನ್ನತೆಯಿಂದ ಮೂಡಿಬರುವ ಸಿನಿಮಾಗಳಿಗೆ ಬೇಡಿಕೆ ಇದೆ. ಈಗ ಅದೇ ಸಾಲಿಗೆ ಸೇರುವ ಸಿನಿಮಾ “ಸೋಮು ಸೌಂಡ್‌ ಇಂಜಿಯರ್‌’. ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ.

Advertisement

ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಟ್ರೇಲರ್‌ ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ. ಮನುಷ್ಯ ಸಂಬಂಧಗಳ ಮತ್ತು ಮಾನವೀಯತೆಯ ಮೌಲ್ಯಗಳ ಕುರಿತಾದ ಚಿತ್ರಕತೆ ಹೊಂದಿದೆ. ಇಡೀ ಕತೆ ಗ್ರಾಮೀಣ ಹಿನ್ನೆಲೆಯಲ್ಲಿ ನಡೆಯುವುದರಿಂದ ಚಿತ್ರೀಕರಣವನ್ನು ಉತ್ತರಕರ್ನಾಟಕದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಇಳಕಲ್‌ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿ ಮಾಡಲಾಗಿದೆ.

ಟೀಸರ್‌ ನೋಡಿದವರಿಗೆ ಇದು ಪಕ್ಕಾ ನಮ್ಮ ದೇಸಿ ಸೊಗಡಿನ ಚಿತ್ರ ಎಂಬುದು ಎದ್ದು ಕಾಣುತ್ತದೆ. ಸೂರಿಯವರ ಹತ್ತಿರ ಕಡ್ಡೀಪುಡಿ , ಕೆಂಡ ಸಂಪಿಗೆ , ದೊಡ್ಮನೆ ಹುಡುಗ , ಟಗರು ಚಿತ್ರಗಳಿಗೆ ಮತ್ತು ದುನಿಯ ವಿಜಯ್‌ ಬಳಿ ಸಲಗ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅಭಿ ಈ ಚಿತ್ರದ ನಿರ್ದೇಶಕರು. ಸ್ವತಂತ್ರ್ಯ ವಾಗಿ ನಿರ್ದೇಶಿಸುತ್ತಿರುವ ಮೊದಲ ಚಿತ್ರವಿದು.

“ಸಲಗ’ ಚಿತ್ರದಲ್ಲಿ ಕೆಂಡ ಅನ್ನೋ ಪಾತ್ರ ನಿರ್ವಹಿಸಿದ್ದ ಶ್ರೇಷ್ಠ ಈ ಚಿತ್ರದ ನಾಯಕ, ಶ್ರುತಿ ಪಾಟೀಲ್‌ ನಾಯಕಿ . ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತವಿದೆ. ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಸಂಭಾಷಣೆಕಾರರಾಗಿರುವ ಮಾಸ್ತಿ ಅವರ ಸಂಭಾಷಣೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next